ಹೊಸ ವರ್ಷಾಚರಣೆ, ಪೊಲೀಸರು ಅಲರ್ಟ್

Social Share

ಬೆಂಗಳೂರು, ಡಿ.26- ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ, ನಗರ ಪೊಲೀಸರು ಬಹಳ ಎಚ್ಚರಿಕೆಯಂದಿರುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ತನಿಖಾ ಸಂಸ್ಥೆಗಳಿಂದ ಇದುವರೆಗೂ ತಮಗೆ ಯಾವುದೇ ಎಚ್ಚರಿಕೆ ಸಂದೇಶ ಬಂದಿಲ್ಲ. ಆದರೂ ನಗರದಲ್ಲಿ ಸೂಕ್ತ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದೇವೆ ಎಂದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಮಂಗಳೂರು ಮತ್ತು ಕೊಯಮತ್ತೂರಿನಲ್ಲಿ ನಡೆದ ಸ್ಪೋಟ ಪ್ರಕರಣ ನಮ್ಮ ಕಣ್ಣ ಮುಂದೆ ಇರುವುದರಿಂದ ಪೊಲೀಸರು ನಿಗಾ ವಹಿಸಿದ್ದಾರೆ. ಅವಧಿ ಮೀರಿ ಕಾರ್ಯನಿರ್ವಹಿ ಸುತ್ತಿರುವ ಹೊಟೇಲ್ , ಬಾರ್ ಹಾಗೂ ಪಬ್‍ಗಳ ಮೇಲೆ ನಾವು ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ. ಅವಧಿ ಮೀರಿ ವಹಿವಾಟು ನಡೆಸುತ್ತಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

8.92 ಕೋಟಿ ಮೌಲ್ಯದ 12 ಕಾರುಗಳ ವಶ : ಇಬ್ಬರು ಬಂಧನ

ಪೊಲೀಸ್ ಇಲಾಖೆ ಯ ನಿಯಮ ಉಲ್ಲಂಘಿಸಿ ಲೇಡಿಸ್ ಬಾರ್‍ಗಳಲ್ಲಿ ಯುವತಿಯರನ್ನು ಅಕ್ರಮ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

New Year celebrations, Police Commissioner, pratap reddy,

Articles You Might Like

Share This Article