ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಸಚಿವ ಅನುರಾಗ್‍ಸಿಂಗ್ ಠಾಕೂರ್ ಕಿಡಿ

Social Share

ನವದೆಹಲಿ,ಮಾ.10- ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿ ದುಷ್ಕ್ರತ್ಯ ಮತ್ತು ಕಾಲ್ಪನಿಕ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಭಾರತದ ಬಗ್ಗೆ ವರದಿಯನ್ನು ಪ್ರಕಟಿಸುವಾಗ ತಟಸ್ಥತೆ ನೀತಿ ಅನುಸರಿಸುವುದನ್ನು ಬಹಳ ಹಿಂದೆಯೇ ಕೈಬಿಟ್ಟಿದೆ. ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ವ್ಯಕ್ತಪಡಿಸಿರುವ ಅಭಿಪ್ರಾಯವು ಚೇಷ್ಟೆ ಮತ್ತು ಕಾಲ್ಪನಿಕವಾಗಿದೆ, ಇದು ಭಾರತೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧ ಅಪಪ್ರಚಾರವನ್ನು ಹರಡುವ ಏಕೈಕ ಉದ್ದೇಶ ಹೊಂದಿದೆ ಎಂದು ಟ್ವೀಟರ್‍ನಲ್ಲಿ ಕಿಡಿಕಾರಿದ್ದಾರೆ.

ನಾಳೆ ಕಾಂಗ್ರೆಸ್‍ನಿಂದ ಗ್ಯಾರಂಟಿ ಕಾರ್ಡ್ ಹಂಚಿಕೆ ಅಭಿಯಾನ

ಕೆಲವು ಸಮಾನ ಮನಸ್ಕ ವಿದೇಶಿ ಮಾಧ್ಯಮಗಳು ಭಾರತ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರ ಬಗ್ಗೆ ಸುಳ್ಳುಗಳನ್ನು ಹರಡುವುದನ್ನು ನಿರಂತರವಾಗಿ ಮುಂದುವರೆಸಿವೆ. ಅಂತಹ ಸುಳ್ಳುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇತರ ಮೂಲಭೂತ ಹಕ್ಕುಗಳಂತೆಯೇ ಪವಿತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಜನರು ಬಹಳ ಪ್ರಬುದ್ಧರಾಗಿದ್ದಾರೆ. ದೇಶ ವಿರೋಧಿ ಕಾರ್ಯಸೂಚಿ ಚಾಲಿತ ಮಾಧ್ಯಮಗಳಿಂದ ನಾವು ಪ್ರಜಾಪ್ರಭುತ್ವದ ವ್ಯಾಕರಣಗಳನ್ನು ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್

ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಹರಡಿಸಿರುವ ಸುಳ್ಳು ಖಂಡನೀಯವಾಗಿದೆ. ಭಾರತೀಯ ನೆಲದಲ್ಲಿ ತಮ್ಮ ನಿರ್ಣಾಯಕ ಕಾರ್ಯಸೂಚಿಯನ್ನು ಜಾರಿಗೆ ತರುವ ಪಾಶ್ಚಿಮಾತ್ಯ ಮನಸ್ಥಿತಿಗೆ ಭಾರತೀಯರು ಅನುಮತಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

New York, Times, opinion, piece, press, freedom, Kashmir, Minister, Anurag Singh,

Articles You Might Like

Share This Article