ವೆಲ್ಲಿಂಗ್ಟನ್, ಜ.23- ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆರ್ಡೆನ್ ಅವರು ದೀರ್ಘಕಾಲಿಕ ಗೆಳೆಯ ಕ್ಲಾರ್ಕ್ ಗ್ಯಾರಿಫೋರ್ಡ್ ಅವರೊಂದಿಗೆ ತಮ್ಮ ವಿವಾಹ ರದ್ದುಪಡಿಸಿದ್ದಾರೆ.ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲುರಾಷ್ಟ್ರವು ಹೊಸ ನಿರ್ಬಂಧಗಳನ್ನು ವಿಸಿರುವ ಹಿನ್ನೆಲೆಯಲ್ಲಿ ವಿವಾಹವಾಗಿ ಸಂತೋಷವಾಗಿರುವುದು ತರವಲ್ಲ ಎಂಬ ಕಾರಣಕ್ಕೆ ಅವರು ವಿವಾಹ ಮಹೋತ್ಸವವನ್ನು ರದ್ದುಮಾಡಿದ್ದಾರೆ.
ವಿವಾಹವೊಂದರ ಬಳಿಕ ಉತ್ತರದಿಂದ ದಕ್ಷಿಣ ದ್ವೀಪಗಳುದ್ದಕ್ಕೂ ಒಂಬತ್ತು ಕೋವಿಡ್-19 ಓಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದು, ಸಮುದಾಯಕ್ಕೆ ಹರಡುತ್ತಿರುವ ಲಕ್ಷಣಗಳು ಗೋಚರಿಸಿವೆ. ಈ ಕಾರಣದಿಂದ ನ್ಯೂಜಿಲೆಂಡ್ ಭಾನುವಾರ ಮಧ್ಯರಾತ್ರಿಯಿಂದ ಮಾಸ್ಕ್‍ಧಾರಣೆ ಕಡ್ಡಾಯಗೊಳಿಸಿ ಜನರು ಗುಂಪುಗೂಡುವುದನ್ನು ಸೀಮಿತಗೊಳಿಸಲಾಗಿದೆ.
ನಾರ್ತ್ ಐಲ್ಯಾಂಡ್‍ನಲ್ಲಿರುವ ಆಕ್ಲೆಂಡ್‍ನಲ್ಲಿ ಒಂದು ವಿವಾಹ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಮಾನದಲ್ಲಿ ಸೌತ್ ಐಲ್ಯಾಂಡ್‍ನಲ್ಲಿರುವ ನೆಲ್ಸನ್‍ಗೆ ಆಗಮಿಸಿದ ಕುಟುಂಬವೊಂದಕ್ಕೆ ಮತ್ತು ಓರ್ವ ವಿಮಾನ ಪರಿಚಾರಕನಿಗೆ ಕೋವಿಡ್ ಪಾಸಿಟಿವ್ ಬಂದಿತ್ತು.
ಇದರಿಂದ ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ ವಿಸಿರುವ ನ್ಯೂಜಿಲ್ಯಾಂಡ್ ಬಾರ್‍ಗಳು, ರೆಸ್ಟೋರೆಂಟ್‍ಗಳು ಮತ್ತು ವಿವಾಹಗಳಂಥ ಒಳಾಂಗಣ ಕಾರ್ಯಕ್ರಮಗಳಲ್ಲಿ 100 ಜನರಿಗಿಂತ ಹೆಚ್ಚು ಜನರು ಸೇರುವ ಹಾಗಿಲ್ಲ ಎಂದು ನಿರ್ಬಂಧ ಹೇರಿತ್ತು. ವ್ಯಾಕ್ಸಿನ್ ಪಾಸ್‍ಗಳನ್ನು ಹೊಂದಿಲ್ಲದ ಸ್ಥಳಗಳಲ್ಲಿ ಈ ಮಿತಿಯನ್ನು 25 ಜನರಿಗೆ ಇಳಿಸಲಾಗಿದೆ.
ನನ್ನ ಮದುವೆ ನಡೆಯುತ್ತಿಲ್ಲ. ಇದೇ ಬಗೆಯ ಸನ್ನಿವೇಶಕ್ಕೆ ಸಿಲುಕಿರುವ ಯಾರ ಬಗ್ಗೆಯೇ ಆದರೂ ನನಗೆ ದುಃಖವಾಗುತ್ತದೆ ಎಂದು ಪ್ರಧಾನಿ ಆರ್ಡೆನ್ ಸುದ್ದಿಗಾರರಿಗೆ ತಿಳಿಸಿದರು.ಆರ್ಡೆನ್ ಅವರು ಮದುವೆ ದಿನಾಂಕವನ್ನು ಪ್ರಕಟಿಸಿರಲಿಲ್ಲ.
ಆದರೆ, ಸದ್ಯದಲ್ಲಿಯೇ ವಿವಾಹ ಜರುಗಲಿದೆ ಎಂಬ ವದಂತಿಗಳಿದ್ದವು ಎಂದು ಆರ್ಡೆನ್ ಅವರ ದೀರ್ಘಕಾಲದ ಒಡನಾಡಿ ಕ್ಲಾರ್ಕ್ ಗ್ಯಾರಿಫೋರ್ಡ್ ಅವರೊಂದಿಗಿನ ವಿವಾಹ ರದ್ದಾಗಿರುವುದಕ್ಕೆ ಏನೆನ್ನಿಸುತ್ತದೆ ಎಂದು ಸುದ್ದಿಗಾರರು ಕೇಳಿದಾಗ ಆರ್ಡೆನ್ ಜೀವನವೇ ಹೀಗೆ ಎಂದು ಉತ್ತರಿಸಿದರು.
