ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ..!
ರಾಯಚೂರು.ಮೇ.16- ವಿಚಿತ್ರವಾದರೂ ಸತ್ಯ,ವೈದ್ಯರು ನವಜಾತ ಶಿಶು ಸಾವನ್ನಪ್ಪಿದೆ ಎಂದು ಕುಟುಂಬದವರಿಗೆ ತಿಳಿಸಿದ ನಂತರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸಿದ್ಧತೆ ನಡೆಸುವಾಗ ಶಿಶು ಜೋರಾಗಿ ಅತ್ತು ಜೀವಂತವಾದ ಘಟನೆ ಸಿಂಧನೂರು ತಾಲೂಕಿನ ತುರುವಿಹಾಳದಲ್ಲಿ ನಡೆದಿದೆ.ತುರುವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿತಮ್ಮ ಶಿಶು ಮಣ್ಣುಪಾಲಾಗುತಿತ್ತು ದೇವೆರು ರಕ್ಷಿಸಿದ್ದಾನೆ ಎಂದು ಹೇಳಿದ್ದಾರೆ.
ಘಟನೆ ವಿವರ:- ತುರ್ವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಅಮರಮ್ಮ ಅವರಿಗೆ ಕಳೆದ ಸೋಮವಾರ ಹೆರಿಗೆಯಾಗಿತ್ತು,ಮರು ದಿನ ಮಗು ಆರೋಗ್ಯ ವ್ಯತ್ಯಯವಾಗಿದೆ ಬೇರೆ ಆಸ್ಪತ್ರೆಗೆ ಹೊಗುವಂತೆ ವೈದರು ತಿಳಿಸಿದರು.
Facebook Comments