ನವದೆಹಲಿ. ಆ.4 – ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನವನ್ನು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಅಲಂಕರಿಸುವ ಸಾಧ್ಯತೆ ಇದೆ. ತ್ರಿವಳಿ ತಲಾಖ್ ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನೀಡಿ ದೇಶದ ಗಮನ ಸೆಳೆದಿದ್ದ ಅವರು ಆಗಸ್ಟ್ 27 ರಂದು ಭಾರತದ 49 ನೇ ಸಿಜೆಐ ಆಗಲಿದ್ದಾರೆ.
ನ್ಯಾಯಮೂರ್ತಿ ಲಲಿತ್ ಅವರು ಆ ಸ್ಥಾನಕ್ಕೆ ಏರಿದರೆ ವಕೀಲರ ಪರಿಷತ್(ಬಾರ್ )ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಏರಿದ ಎರಡನೇ ಸಿಜೆಐ ಆಗುತ್ತಾರೆ. ಜನವರಿ 1971 ರಲ್ಲಿ 13 ನೇ ಸಿಜೆಐ ಆದ ನ್ಯಾಯಮೂರ್ತಿ ಎಸ್ ಎಂ ಸಿಕ್ರಿ ಅವರು ಮಾರ್ಚ್ 1964 ರಲ್ಲಿ ನೇರವಾಗಿ ಉನ್ನತ ನ್ಯಾಯಾಲಯದ ಪೀಠಕ್ಕೆ ಏರಿದ ಮೊದಲ ವಕೀಲರಾಗಿದ್ದರು.
ನ್ಯಾಯಮೂರ್ತಿ ಲಲಿತ್ ಅವರು ಆಗಸ್ಟ್ 13, 2014 ರಂದು ಸುಪ್ರೀಂ ಕೋರ್ಟ್ ನ್ಯಾಯಾೀಧಿಶರಾಗಿ ನೇಮಕಗೊಂಡರು. ಐವರು ನ್ಯಾಯಾೀಧಿಶರ ಸಂವಿಧಾನ ಪೀಠದ ಆಗಸ್ಟ್ 2017 ರ ತೀರ್ಪು ಒಂದು ಐತಿಹಾಸಿಕ ತೀರ್ಪುಗಳಲ್ಲಿ ಒಂದಾಗಿದೆ, ಮತ್ತೊಂದು ಮಹತ್ವದ ತೀರ್ಪಿನಲ್ಲಿ, ನ್ಯಾಯಮೂರ್ತಿ ಲಲಿತ್ ನೇತೃತ್ವದ ಪೀಠವು ಕೇರಳದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಐತಿಹಾಸಿಕ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ನಿರ್ವಹಣೆಯ ಹಕ್ಕನ್ನು ತಿರುವಾಂಕೂರಿನ ಹಿಂದಿನ ರಾಜಮನೆತನಕ್ಕೆ ಹೊಂದಿದೆ ಎಂದು ತೀರ್ಪು ನೀಡಿತು.
1957 ನವೆಂಬರ್ 9, ರಂದು ಜನಿಸಿದ ನ್ಯಾಯಮೂರ್ತಿ ಲಲಿತ್ ಅವರು ಜೂನ್ 1983 ರಲ್ಲಿ ವಕೀಲರಾಗಿ ದಾಖಲಾಗಿದ್ದರು ಮತ್ತು ಡಿಸೆಂಬರ್ 1985 ರವರೆಗೆ ಬಾಂಬೆ ಹೈಕೋರ್ಟ್‍ನಲ್ಲಿ ನಂತರ ಜನವರಿ 1986 ರಲ್ಲಿ ದೆಹಲಿಯಲ್ಲಿ ತಮ್ಮ ವಕೀಲರಾಗಿ ಸೇವೆ ಸಲ್ಲಿಸಿದ್ದರು ಏಪ್ರಿಲ್ 2004 ರಲ್ಲಿ ಅವರನ್ನು ಹಿರಿಯ ವಕೀಲರಾಗಿ ನೇಮಿಸಲಾಯಿತು. ಸುಪ್ರೀಂ ಕೋರ್ಟ್ ಮೂಲಕ. 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು.
2014ರಲ್ಲಿ ಭಾರತದ ಸವೋಚ್ಚ ನ್ಯಾಯಾಲದ ನ್ಯಾಯಮೂರ್ತಿ ಲಲಿತ್‍ಅವರು ತಮ್ಮ ನೈಜ ಮಾತು ಸಮಾಜದ ಕಳಕಳಿ ಎಲ್ಲರೂ ಮೆಚ್ಚುತ್ತಿದ್ದರು ಪ್ರಸ್ತುತ ಸಿಜೆಐ ಸ್ಥಾನ ಅಲಂಕರಿಸಿದರೂ 3 ತಿಂಗಳಲ್ಲೇ ಅಂದರೆ ನವೆಂಬರ್ 8, 2022 ರಂದು ನಿವೃತ್ತರಾಗಲಿದ್ದಾರೆ.