ಮಾನವ ಹಕ್ಕುಗಳ ಆಯೋಗದಿಂದ ತಮಿಳುನಾಡು, ಬಿಹಾರ ಸರ್ಕಾರಗಳಿಗೆ ನೊಟೀಸ್

Social Share

ನವದೆಹಲಿ, ಡಿ. 3- ಮದರಸದಲ್ಲಿ 12 ಅನಾಥ ಮಕ್ಕಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಮಿಳುನಾಡು ಮತ್ತು ಬಿಹಾರ ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ.

ಬಿಹಾರದಿಂದ ಕರೆತರಲಾದ 12 ಮಕ್ಕಳನ್ನು ಮದರಾಸದಲ್ಲಿ ಕೂಡಿ ಹಾಕಿ ನಿಂದಿಸಲಾಗಿದ್ದು, ಕಿರುಕುಲ ನೀಡುವುದಾಗಿ ವರದಿಯಾಗಿದೆ. ಇದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎರಡು ರಾಜ್ಯಸರ್ಕಾರಗಳಿಗೆ ಮತ್ತು ಚೆನ್ನೈ ಪೊಲೀಸ್ ಆಯುಕ್ತರಿಗೆ ನೊಟೀಸ್ ಜಾರಿ ಮಾಡಿದೆ.

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”

ಪ್ರಕರಣದ ಕುರಿತು ನಾಲ್ಕು ದಿನಗಳ ಒಳಗಾಗಿ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ಚೆನ್ನೈನ ಪೊಣೈಮನಮೇಡು ಪ್ರದೇಶದಲ್ಲಿನ ಮದರಸದಲ್ಲಿ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಹಾಯವಾಣಿಗೆ ದೂರು ಬಂದಿತು.

ಮಹಾರಾಷ್ಟ್ರದಲ್ಲಿ ದಿವ್ಯಾಂಗರಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭ

ಕಾರ್ಯಾಚರಣೆ ನಡೆಸಿದ ಪೊಲೀಸರು ಮಕ್ಕಳಿಗೆ ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಬಳಿಕ ಬಾಲಮಂದಿರಕ್ಕೆ ಸ್ಥಳಾಂತರಿಸಿದ್ದಾರೆ.

#NHRC, #Issues, #Notice, Bihar, Tamil Nadu,

Articles You Might Like

Share This Article