ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ

Social Share

ಮಂಗಳೂರು, ನ.13- ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಸುಳ್ಯಾದ ಶಾಹಿದ್ ಬೆಳ್ಳಾರೆ (40) ಎಂಬವರನ್ನು ನಿನ್ನೆ ಬಂಧಿಸಿರುವುದಾಗಿ ಹೇಳಲಾಗಿದೆ.

ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26ರಂದು ನೆಟ್ಟಾರು ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದರು. ಘಟನೆಯಲ್ಲಿ ಭಯೋತ್ಪಾದನಾ ಕೃತ್ಯದ ಲಕ್ಷಣಗಳಿವೆ ಎಂಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ.

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ಈವರೆಗಿನ ತನಿಖೆಯಲ್ಲಿ 13 ಜನರನ್ನು ಬಂಧಿಸಲಾಗಿದೆ. ಕೆಲವು ಆರೋಪಿಗಳ ಕುರಿತು ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಲಗಿದೆ.

ಏರ್ ಶೋ ವೇಳೆ ವಿಮಾನಗಳ ಡಿಕ್ಕಿ, 7 ಮಂದಿ ಸಾವು

ತನಿಖೆ ಮುಂದುವರೆದಿದ್ದು ನಿನ್ನೆ ಶಾಹಿದ್ ಬೆಳ್ಳಾರೆ ಎಂಬುವರನ್ನು ಬಂಧಿಸಲಾಗಿದೆ. ಎಸ್‍ಡಿಪಿಐ ನಾಯಕರಾದ ಶಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆ ಅವರ ಸಂಬಂಧಿಯಾಗಿರುವ ಶಾಹಿದ್ ಬಂಧನದ ನಂತರ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

Articles You Might Like

Share This Article