ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ನಿಷೇಧಿತ ಪಿಎಫ್‍ಐ ಸಂಘಟನೆ ಕೈವಾಡ

Social Share

ಬೆಂಗಳೂರು,ನ.14- ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‍ಐ ಸಂಘಟನೆಯ ಕೈವಾಡವಿರುವುದು ತನಿಖೆಯಿಂದ ಸಾಬೀತಾಗಿದೆ.

ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದೆ. ನಿಷೇಧಿತ ಪಿಎಫ್‍ಐನ ಸದಸ್ಯರಾದ ಹಾಗೂ ಪ್ರಸ್ತುತ ಎನ್‍ಐಎ ವಶದಲ್ಲಿರುವ ಶಫೀ ಮತ್ತು ಶಾಹಿದ್ ಅವರೇ ಕೊಲೆಯ ಸೂತ್ರದಾರರಾಗಿದ್ದಾರೆ ಎಂದು ಶಂಕಿಸಿದೆ.

ಮಂಗಳೂರು ಜಿಲ್ಲೆಯಾದ್ಯಂತ ಬಿಜೆಪಿಯನ್ನು ಸಂಘಟಿಸುತ್ತಿದ್ದ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದರೆ ಸಂಘಟನೆಯನ್ನು ಕುಗ್ಗಿಸಬಹುದೆಂಬ ಲೆಕ್ಕಾಚಾರದಿಂದಲೇ ಕಗ್ಗೊಲೆ ಮಾಡಿದ್ದಾರೆ ಎಂಬ ಅಂಶವನ್ನು ಪತ್ತೆ ಮಾಡಿದೆ.

ಇಡಿ ಮುಂದೆ ಡಿ.ಕೆ.ಶಿವಕುಮಾರ್ ಮತ್ತೆ ಹಾಜರು

ಹಿಂದೂಪರವಾಗಿ ಯಾವಾಗಲು ಮುಂಚೂಣಿಯಲ್ಲಿರುತ್ತಿದ್ದ ಪ್ರವೀಣ್ ನೆಟ್ಟಾರು ಅನ್ಯ ಕೋಮಿನವರನ್ನು ಕೆಲವು ಕಾರಣಗಳಿಂದ ಎದುರು ಹಾಕಿಕೊಂಡಿದ್ದ. ಸಹಜವಾಗಿ ಇದು ಎರಡು ಕೋಮುಗಳ ನಡುವೆ ಆಗಾಗ್ಗೆ ಘರ್ಷಣೆ ನಡೆಯಲು ಕಾರಣವಾಗಿತ್ತು. ಅದರಲ್ಲೂ ಪ್ರವೀಣ್ ನೆಟ್ಟಾರು ಸುತ್ತೂರು ಮತ್ತು ಸುಳ್ಯ ತಾಲ್ಲೂಕಿನಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಹೋರಾಟದಲ್ಲೂ ಕಾಣಿಸಿಕೊಂಡಿದ್ದ.

ವಿಶೇಷವಾಗಿ ಒಂದು ಸಮುದಾಯದವರು ನಡೆಸುತ್ತಿದ್ದ ಚಿಕನ್ ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡದಂತೆ ಅಭಿಯಾನವನ್ನು ಆರಂಭಿಸಿದ್ದೇ ಪ್ರಾಣಕ್ಕೆ ಮುಳುವಾಯಿತು. ನೆಟ್ಟಾರುನನ್ನು ಕೊಲೆ ಮಾಡುವ ಮೂಲಕ ಜಿಲ್ಲೆಯಲ್ಲಿ ಭಯದ ವಾತಾವರಣ ಮೂಡಿಸಬೇಕು. ಅಲ್ಲದೆ ನಮ್ಮ ಸಮುದಾಯದ ವಿರುದ್ಧ ಯಾರು ಕೂಡ ಮಾತನಾಡದಂತೆ ಪಾಠ ಕಲಿಸಬೇಕೆಂದು ಬಂತ ಶಫೀ ಮತ್ತು ಶಾಹಿದ್ ಸಂಚು ರೂಪಿಸಿದ್ದರು.

ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಬಿಜೆಪಿ ಸಜ್ಜು

ಅಲ್ಲದೆ ಜು.19ರಂದು ಮಂಗಳೂರಿನಲ್ಲಿ ಮಸೂದ್ ಎಂಬ ಮುಸ್ಲಿಂ ಯುವಕನನ್ನು ಕೊಲೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರವಾಗಿಯೇ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಕಳೆದ ಜು.26ರಂದು ಪ್ರವೀಣ್ ನೆಟ್ಟಾರುನನ್ನು ಸ್ವಗ್ರಾಮದಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಈಗಾಗಲೇ 14 ಜನರನ್ನು ಬಂಧಿಸಿದೆ.

Articles You Might Like

Share This Article