ಬೆಂಗಳೂರು, ಫೆ.11- ಅಲ್‍ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರನನ್ನು ಆಂತರಿಕ ಭದ್ರತಾ ವಿಭಾಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಇಂದು ಬೆಳಗಿನ ಜಾವ ಬಂಧಿಸಿವೆ.
ನಗರದ ಥಣಿ ಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಸಾಫ್ಟವೇರ್ ಎಂಜಿನಿಯರ್ ಆರೀಫ್ ಎಂಬಾತನನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ತನಿಖಾ ಸಂಸ್ಥೆಗಳು ವಶಕ್ಕೆ ತೆಗೆದುಕೊಂಡು ಆತನಿಂದ ಒಂದು ಕಂಪ್ಯೂಟರ್, ಎರಡು ಹಾರ್ಡ್‍ಡಿಸ್ಕ್‍ಗಳನ್ನು ವಶಪಡಿಸಿಕೊಂಡಿವೆ.
ಉತ್ತರ ಪ್ರದೇಶ ಮೂಲದವನಾದ ಆರೀಫ್ ಅದೇ ರಾಜ್ಯದ ಮಹಿಳೆಯನ್ನು ವಿವಾಹವಾಗಿದ್ದು, ಬೆಂಗಳೂರಿಗೆ ಬಂದು ಥಣಿ ಸಂದ್ರದ ಮಂಜುನಾಥ ನಗರದಲ್ಲಿ ವಾಸವಾಗಿದ್ದನು. ಸಾಫ್ಟ್‍ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆರೀಫ್ ಪ್ರಸ್ತುತ ವರ್ಕ್ ಫ್ರಮ್ ಹೋಂ ಇದ್ದುದ್ದರಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದನು.
ಗುಜರಾತ್‍ನಲ್ಲಿ ಇಂದು ಮುಂಜಾನೆ 3.8 ತೀವ್ರತೆಯ ಭೂಕಂಪ
ಕಳೆದ ಎರಡು ವರ್ಷಗಳಿಂದ ಅಲ್‍ಖೈದಾ ಉಗ್ರ ಸಂಘಟನೆಯೊಂದಿಗೆ ಆರೀಫ್ ನಿರಂತರ ಸಂಪರ್ಕದಲ್ಲಿದ್ದು, ಸಂಘಟನೆಗೆ ಸಂಬಂಧಿಸಿದಂತೆ ಟೆಲಿಗ್ರಾಂ ಮತ್ತಿತರ ಗ್ರೂಪ್‍ಗಳಲ್ಲಿ ಸಕ್ರಿಯನಾಗಿದ್ದನು. ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯ ಆಂತರಿಕ, ಭದ್ರತಾ ವಿಭಾಗದ ಜಂಟಿ ಕಾರ್ಯಾಚರಣೆ ಕೈಗೊಂಡು ಆರೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದವು.
ಈತ ಮುಂದಿನ ಮಾರ್ಚ್ ತಿಂಗಳಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ವಿಮಾನ ಟಿಕೇಟ್ ಸೇರಿದಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಇಂದು ಮುಂಜಾನೆ ಆತ ವಾಸವಾಗಿದ್ದ ಮನೆ ಮೇಲೆ ದಾಳಿ ಮಾಡಿ, ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ 8 ವರ್ಷದಿಂದ ದೇಶ ಶಾಂತಿಯುತವಾಗಿದೆ : ಅಮಿತ್ ಶಾ
ಈ ಹಿಂದೆ ಕೂಡ ಸಿರಿಯಾಕ್ಕೆ ಇರಾನ್ ಮೂಲಕ ಹೋಗಲು ಯತ್ನಿಸಿದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಆತ ಹೋಗಲು ಸಾಧ್ಯವಾಗಿರಲಿಲ್ಲ. ಈಗ ಐಎಸ್‍ಡಿ ಹಾಗೂ ಕೇಂದ್ರ ತನಿಖೆ ಸಂಸ್ಥೆಗಳು ಆತನನ್ನು ನಿಗೂಢ ಸ್ಥಳದಲ್ಲಿ ಇಟ್ಟು ತೀವ್ರ ವಿಚಾರಣೆಗೆ ಒಳಪಡಿಸಿವೆ.
NIA, arrests, suspected, Al-Qaeda, terrorist, Bengaluru,