ಅಹಮದಾಬಾದ್,ಫೆ.21-ದೇಶದ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಬಲಗೈ ಭಂಟ ಕುಲ್ವಿಂದರ್ ಅವರ ಮನೆ ಸೇರಿದಂತೆ ವಿವಿಧ ರಾಜ್ಯಗಳ ಹಲವಾರು ಅಡ್ಡೆಗಳ ಮೇಲೆ ಎನ್‍ಐಎ ಪೊಲೀಸರು ಮುಗಿ ಬಿದ್ದಿದ್ದಾರೆ.
ಬಿಷ್ಣೋಯ್ ಸಹವರ್ತಿಯಾಗಿರುವ ಕುಲ್ವಿಂದರ್ ಬಿಷ್ಣೋಯ್ ಗ್ಯಾಂಗ್‍ನ ಹಲವಾರು ಸದಸ್ಯರಿಗೆ ಆಶ್ರಯ ನೀಡಿದ ಆರೋಪ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದಾನೆ.
ಸಂಕಷ್ಟ ಸವಾಲುಗಳ ನಡುವೆ ಆರ್ಥಿಕ ಸದೃಢತೆ : ಬೊಮ್ಮಾಯಿ
ಕುಲ್ವಿಂದರ್ ಸಿಂಗ್ ಅವರನ್ನು ಬಂಧಿಸಿರುವುದಲ್ಲದೆ, ದರೋಡೆಕೋರ ಸಿಂಡಿಕೇಟ್‍ಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದ 70 ಕ್ಕೂ ಹೆಚ್ಚು ಕ್ರಿಮಿನಲ್ ಅಡ್ಡೆಗಳ ಮೇಲೂ ದಾಳಿ ನಡೆಸಲಾಗಿದೆ.
ದರೋಡೆಕೋರರು ಮತ್ತು ಅವರ ಕ್ರಿಮಿನಲ್ ಸಿಂಡಿಕೇಟ್‍ಗಳ ವಿರುದ್ಧ ಎನ್‍ಐಎ ದಾಖಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದರೋಡೆಕೋರರ ಜಾಲದ ಮೇಲೆ ಎನ್‍ಐಎ ನಡೆಸುತ್ತಿರುವ ನಾಲ್ಕನೇ ಸುತ್ತಿನ ದಾಳಿ ಇದಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ 3ಸಾವಿರ ಕೋಟಿ ಖರ್ಚು : ಸುಧಾಕರ್
ಪಂಜಾಬ್‍ನ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಹರಿಯಾಣದ ಯಮುನಾ ನಗರದ ಮುಂಡಾ ಮಜ್ರಾ ಪ್ರದೇಶದಲ್ಲಿ ಎನ್‍ಐಎ ದಾಳಿ ನಡೆಸಿದೆ. ಆಜಾದ್ ನಗರದಲ್ಲಿ ಎನ್‍ಐಎ ತಂಡದೊಂದಿಗೆ ಸ್ಥಳೀಯ ಪೊಲೀಸ್ ಪಡೆ ಕೂಡ ಇತ್ತು.
NIA, conducts, raids, 70 locations, linked, Bishnoi,