50 ಕಡೆ ಎನ್‍ಐಎ ದಾಳಿ

Social Share

ನವದೆಹಲಿ.ಅ,18- ಭಾರತ ಮತ್ತು ವಿದೇಶಗಳಲ್ಲಿ ನೆಲೆಯೂರಿರುವ ಅಂತಾ ರಾಷ್ಟ್ರೀಯ ಸ್ಮಗ್ಲರ್ ಗಳು, ದರೋಡೆಕೋರರು, ಭಯೋತ್ಪಾದಕರು, ಗ್ಯಾಂಗ್ ಸ್ಟರ್‍ನಡೆಸುವ ಕುತೃತ್ಯಗಳನ್ನು ಪತ್ತೆ ಹಚ್ಚಿ ಮಟ್ಟಹಾಕುವ
ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ದೇಶದ 50ಕ್ಕೂ ಹೆಚ್ಚು ಭಾಗಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಪಂಜಾಬ್ ರಾಜ್ಯದ 9 ಕಡೆಗಳಲ್ಲಿ, ಹರ್ಯಾಣ, ರಾಜಸ್ತಾನ ಮತ್ತು ದೆಹಲಿಯಲ್ಲಿ ಈ ದಾಳಿ ನಡೆದಿದೆ.
ಕಳೆದ 9 ತಿಂಗಳಲ್ಲಿ ಭದ್ರತಾ ಪಡೆ ನೆರೆಯ ಪಾಕಿಸ್ತಾನದಿಂದ ಭಾರತದ ಪ್ರದೇಶದೊಳಗೆ 191 ಡ್ರೋನ್ ಗಳು ಅಕ್ರಮವಾಗಿ ಪ್ರವೇಶಿಸಿದ್ದನ್ನು ಪತ್ತೆಹಚ್ಚಿತ್ತು. ಮಾದಕ ವಸ್ತು ,ಬಂದೂಕು ಸ್ಪೋಟಕವನ್ನು ಕಳ್ಳ ಸಾಗನೆ ಮಾಡುವುದನ್ನು ಅನೇಕ ಭಾರಿ ಸೇನೆ ತಡೆದಿದೆ.

ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ತೀವ್ರ ಆತಂಕ ಉಂಟಾಗಿದ್ದು ,ಎನ್‍ಐಎ ವ್ಯಪಕ ತನಿಖೆ ನಡೆಸುತ್ತಿದೆ.ಕಳೆದ ಅ. 14ರಂದು ರಾಷ್ಟ್ರೀಯ ತನಿಖಾ ದಳ ಡ್ರೋನ್ ಮೂಲಕ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿತ್ತು.

ಇಂತಹ ಅನಧಿಕೃತ ಪ್ರವೇಶಗಳು ಆಗಾಗ ಆಗುತ್ತಿರುತ್ತದೆ ಎಂದು ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳು ನೀಡಿದ್ದ ಮಾಹಿತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿತ್ತು.

ನಿನ್ನೆ ಸೋಮವಾರ ಗಡಿ ಭದ್ರತಾ ಪಡೆ ಪಂಜಾಬ್ ನ ಅಮೃತಸರ್ ವಲಯದೊಳಗೆ ಪಾಕಿಸ್ತಾನದಿಂದ ಪ್ರವೇಶವಾಗಿದ್ದ ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

Articles You Might Like

Share This Article