ನವದೆಹಲಿ,ಮಾ.15- ಜಾರ್ಖಾಂಡ್‍ನ ಬಿಜೆಪಿ ಶಾಸಕ ಗುರುಚರಣ್ ನಾಯಕ್ ಮೇಲೆ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಕಳೆದ ವರ್ಷ ಜನವರಿ 4 ರಂದು ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯ ಜಿಲ್ರುವಾ ಶಾಲೆಯ ಆಟದ ಮೈದಾನದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಈ ವೇಳೆ ಸಿಪಿಐ (ಮಾವೋವಾದಿ) ನಕ್ಸಲರು ಪೊಲೀಸರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದರು.
ಯುಗಾದಿಗೆ ಊರಿಗೆ ಹೋಗಲು ಬೆಂಗಳೂರಿಗರು ಪರದಾಡುವುದು ಗ್ಯಾರಂಟಿ
ಇದೇ ಜನವರಿ 1ರಂದು ಎನ್‍ಐಎ ಪ್ರಕರಣದ 14 ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿ ದಾಖಲಿಸಿದೆ. ತನಿಖೆ ಆರಂಭಿಸಿ, ಮಾವೋವಾದಿಗಳನ್ನು ಬೆಂಬಲಿಸುವ ಜಾಲದ ಸಕ್ರಿಯ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದೆ.
ಇಟ್ಟಿಗೆ ಭಟ್ಟಿ ಕಾರ್ಖಾನೆಯಲ್ಲಿ ಉಸಿರುಗಟ್ಟಿ 5 ಕಾರ್ಮಿಕರ ಸಾವು
ಹಿಂದೆ ದಾಳಿಗೆ ನೆರವಾಗಿರುವುದಲ್ಲದೆ, ದಾಳಿಕೋರರಿಗೆ ಶಸ್ತ್ರಾಸ್ತ್ರಾಗಳನ್ನು ಪೂರೈಸಿದರು ಎಂದು ಆರೋಪಿಸಲಾಗಿದೆ. ಶೋಧ ಕಾರ್ಯಾಚರಣೆಯಲ್ಲಿ ಸಿಪಿಐ (ಮಾವೋವಾದಿ) ನ ಹಲವಾರು ಪೋಸ್ಟರ್‍ಗಳು, ಅಕ್ರಮವಾದ ಕೊಲ್ಹಾನ್ ರಾಜ್ಯಕ್ಕೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಇತರ ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಎನ್‍ಐಎ ಅಧಿಕಾರಿ ತಿಳಿಸಿದ್ದಾರೆ.
NIA, conducts, raids, Jharkhand, Nayak, attack, case,