ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದೆ ಫಾರ್ಮಸಿಸ್ಟ್ ಉಮೇಶ್ ಹತ್ಯೆಗೆ ಕಾರಣ

Social Share

ಮುಂಬೈ,ಡಿ.17- ಅಮರಾವತಿ ಮೂಲದ ಫಾರ್ಮಸಿಸ್ಟ್ ಉಮೇಶ್ ಹತ್ಯೆಗೆ ಬಿಜೆಪಿ ನಾಯಕಿ ನೂಪುರ್ ಶರ್ಮ ಅವರ ಬೆಂಬಲಿಸಿದ್ದೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಪ್ರವಾದಿ ಮಹಮ್ಮದ್ ಕುರಿತು ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯನ್ನು ಉಮೇಶ್ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೊೀಸ್ಟ್ ಮಾಡಿದ್ದರೂ ಈ ಕಾರಣಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದೆ.

ಶರ್ಮಾ ಹೇಳಿಕೆಯನ್ನು ಬೆಂಬಲಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಒಂದು ಗುಂಪು ನಿರಂತರ ಪ್ರಯತ್ನ ಮಾಡುತ್ತಿತ್ತು. ಶರ್ಮ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಉಮೇಶ್ ಅವರನ್ನು ಇದೆ ಕಾರಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಎನ್ಐಎ 11 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.

11 ಮಂದಿ ವಿರುದ್ಧ ಎನ್ಐಎ ವಿಶೇಷ ನ್ಯಾಯಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿರುವ ಎನ್ಐಎ ಅಧಿಕಾರಿಗಳಿಗೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸುವಂತೆ ತನಿಖಾ ಸಂಸ್ಥೆಯ ಮನವಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಆರೋಪಿಗಳಾಗಿರುವ ಮುದಸ್ಸಿರ್ ಅಹಮದ್, ಶಾರುಖ್ ಖಾನ್, ಅಬ್ದುಲ್ ಶೇಖ್, ಮೊಹಮ್ಮದ್ ಶೋಬ್, ಅತೀಬ್ ರಶೀದ್, ಯೂಸುಫ್ ಖಾನ್ , ಇರ್ಫಾನ್ ಖಾನ್ , ಅಬ್ದುಲ್ ಅರ್ಬಾಜï, ಮುಶಿಫಿಕ್ ಅಹ್ಮದ್, ಶೇಖ್ ಶಕೀಲ್ ಮತ್ತು ಶಾಹಿಮ್ ಅಹಮದ್ ಅವರನ್ನು ಈಗಾಗಲೇ ಬಂಸಲಾಗಿದೆ.

ಆರೋಪಿಗಳು, ಜನರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಉದ್ದೇಶದಿಂದ ಜೂನ್ 21, 2022 ರಂದು ಪೂರ್ವ ಮಹಾರಾಷ್ಟ್ರದ ಅಮರಾವತಿ ನಗರದ ಘಂಟಾಘರ್ ಪ್ರದೇಶದಲ್ಲಿ ಉಮೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಹೆಯನ್ನು ಬರ್ಬರವಾಗಿ ಕೊಂದರು ಎಂದು ಎನïಐಎ ತಿಳಿಸಿದೆ.

#NIA, #FilesChargesheet, #Murder, #AmravatiBased, #Pharmacist, #UmeshKolhe, 

Articles You Might Like

Share This Article