ಬೆಂಗಳೂರು,ಮಾ.18- ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತುಂಗಾ ತೀರದ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ವಿದೇಶಿ ಉಗ್ರಗಾಮಿಯ ಸಲಹೆಯಂತೆ ಶಂಕಿತ ಉಗ್ರರರು 25 ಕಡೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ.
ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಈಗ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿದೇಶಿ ಉಗ್ರರ ನೆರವಿನಂತೆ ಈ ಕೃತ್ಯ ನಡೆಸಲಾಗಿದೆ ಎಂದು ಉಲ್ಲೇಖಿಸಿದೆ.
ಶಂಕಿತ ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದು, ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಉಗ್ರ ಶಾರಿಕ್, ಮಾಜ್ ಮುನೀರ್, ಸಯ್ಯದ್ ಯಾಸಿನ್ ಹೆಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ರಕೂನ್ ನಾಯಿಗಳಿಂದ ಕೋವಿಡ್ ಹರಡಿರುವ ಸಾಧ್ಯತೆ
ಮಾಜ್ ಮುನೀರ್‍ಯಾಸಿನ್ ಇಬ್ಬರೂ ಬಿಟೆಕ್ ಪದವೀಧರರಾಗಿದ್ದು, ದೇಶದ ಐಕ್ಯತೆ ಮತ್ತು ಸಾರ್ವಭಮತ್ವಕ್ಕೆ ದಕ್ಕೆ ತಂದಿದ್ದಾರೆ. ಆಗುಂಬೆ, ವರಾಹಿ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗಿದ್ದ ವೇಳೆ ಇಬ್ಬರು ಜಾಗಗಳ ಬಗ್ಗೆ ಮಾಹಿತಿ ಪಡೆದು ಸೋಟಕ್ಕೆ ಸ್ಥಳ ಗುರುತಿಸಿದ್ದರು.
ಈ ಇಬ್ಬರೂ ಶಂಕಿತ ಉಗ್ರರಿಗೆ ಕ್ರಿಪ್ರೋ ಕರೆನ್ಸಿಯ ಮೂಲಕ ಹಣ ರವಾನೆಯಾಗುತ್ತಿತ್ತು. ಮಾಜ್ ಸುಮಾರು 1.5 ಲಕ್ಷ ಹಣ ಪಡೆದಿದ್ದರೇ, ಸಯ್ಯದ್ ಯಾಸಿನ್ 62 ಸಾವಿರ ರೂ ಹಣ ಪಡೆದಿದ್ದಾನೆ. ಇವರು ವೇರ್ ಹೌಸ್, ಮದ್ಯದಂಗಡಿ, ಹಾರ್ಡವೇರ್ ಶಾಪ್ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವ ಹುನ್ನಾರ ರೂಪಿಸಿದ್ದರು.
ನಾಯಕರ ಪ್ರಯತ್ನದಿಂದಲೂ ಬಗೆಹರಿಯದ ಕಮಲ ಕಲಹ
ಶಂಕಿತ ಉಗ್ರ ಶಾರೀಕ್ 2022ರಲ್ಲಿ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಪೋಟಿಸಲು ಹುನ್ನಾರ ರೂಪಿಸಿದ್ದನು. ಆದರೆ ಮಾರ್ಗ ಮಧ್ಯದಲ್ಲಿಯೇ ಕುಕ್ಕರ್ ಸಿಡಿದ ಹಿನ್ನಲೆ ನಡೆಯಬೇಕಿದ್ದ ಸಾಂಭವ್ಯ ದುರಂತ ತಪ್ಪಿಹೋಗಿದೆ ಎಂದು ಎನ್‍ಐಎ ಹೇಳಿದೆ.
NIA, files, chargesheet, Shivamogga, ISIS, terror, module, case,