ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪ್ರಕರಣ ಎನ್‍ಐಎಗೆ..?

Spread the love

ಬೆಂಗಳೂರು,ಆ.17-ರಾಜ್ಯವನ್ನೇ ತಲ್ಲಣಗೊಳಿಸಿರುವ ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಲು ಮುಂದಾಗಿದೆ.

ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಡಿಜಿಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಯನ್ನು ಎನ್‍ಐಎಗೆ ವಹಿಸುವುದು ಹಾಗೂ ಇದಕ್ಕೆ ಕಾರಣವಾಗಿರುವ ಎಸ್‍ಡಿಪಿಐ ಸಂಘಟನೆಯನ್ನು ನಿಷೇಸುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ.

ಕಳೆದ ಮಂಗಳವಾರ ರಾತ್ರಿ ನಡೆದ ಈ ಗಲಭೆ ಕೇವಲ ಬೆಂಗಳೂರಿಗೆ ಸೀಮಿತವಾಗದೆ ಅಂತಾರಾಜ್ಯಮಟ್ಟದಲ್ಲೂ ಸಂಬಂಧವಿದೆ ಎಂಬ ಕೇಂದ್ರ ಗುಪ್ತಚರ ವಿಭಾಗ ರಾಜ್ಯಕ್ಕೆ ಮಾಹಿತಿ ನೀಡಿದೆ.

ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ ಸುಮಾರು 10 ರಾಜ್ಯಗಳಲ್ಲಿ ಎಸ್‍ಡಿಪಿಐ ತನ್ನ ಸಂಘಟನೆಯ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಹೀಗಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕೋಮುಗಲಭೆ ಸಂಭವಿಸಿದರೆ ಸಹಜವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಸಂಘಟನೆ ಇನ್ನಷ್ಟು ಒಗ್ಗೂಡಲು ವೇದಿಕೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಗಲಭೆಯನ್ನು ಸೃಷ್ಟಿಸಲಾಗಿದೆ ಎಂದು ಗುಪ್ತಚರ ವಿಭಾಗ ಮಾಹಿತಿ ಒದಗಿಸಿದೆ.

ಮುಂಬರುವ ಬಿಹಾರ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‍ಡಿಪಿಐ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಸ್ರ್ಪಸಲು ಮುಂದಾಗಿತ್ತು. ಜತೆಗೆ ಪ್ರತಿ ರಾಜ್ಯಗಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ರ್ಪಸಿ ಗೆಲುವು ಸಾಸಬೇಕೆಂಬ ಮಹದಾಸೆ ಹೊಂದಿದೆ.

ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಕೇರಳ ಸಂಬಂಧ ಇರುವುದು ತಿಳಿದುಬಂದಿದ್ದು, ಇದೀಗ ಸಿಸಿಪಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಸಿದಂತೆ ಗಲಭೆ ಮಾಡಿದ ಪುಂಡರು ಅಂತಾರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು, ಡಿಜೆಹಳ್ಳಿಯ ಪುಂಡರಿಗೆ ಕೇರಳ ರಾಜ್ಯವೇ ಅಡಗುತಾಣವಾಗಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಎಚ್ಚರಿಸಿದೆ.

ಗಲಭೆ ಎಬ್ಬಿಸಿ ಬೆಂಗಳೂರು ತೊರೆದಿರುವ 30ಕ್ಕೂ ಹೆಚ್ಚು ಸ್ಥಳೀಯ ಕಿಡಿಗೇಡಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಕೇಂದ್ರ ಪತ್ತೆಮಾಡಿದೆ.

ಬಂಧನವಾಗಿರುವ ಆರೋಪಿಗಳ ಮಾಹಿತಿ, ಅವರ ಮೊಬೈಲ್ ಕರೆಗಳ ಸಂಭಾಷಣೆಯಲ್ಲಿ ಈ ಮಾಹಿತಿ ಬಟಾಬಲಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಸರ್ಕಾರ ಇಂಚಿಂಚು ಮಾಹಿತಿಯನ್ನು ರಾಜ್ಯಕ್ಕೆ ರವಾನಿಸಿದೆ.

ಪ್ರಕರಣದ ರೂವಾರಿಗಳಾದ ಉಬೇರ್, ಮುದಾಸಿರ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ಕೇರಳ ಅಡಗುತಾಣವಾಗಿದೆ. ಕೇರಳವೇ ಸುರಕ್ಷಿತ ಸ್ಥಳ ಎಂದು ಭಾವಿಸಿರುವ ದುಷ್ಕರ್ಮಿಗಳು ಪೂರ್ವ ನಿಯೋಜನೆಯಂತೆ ಅಲ್ಲಿಗೆ ಪರಾರಿಯಾಗಿದ್ದಾರೆ.

ಈ ಎಲ್ಲ ಮಾಹಿತಿಯನ್ನು ಕೇಂದ್ರ ಗುಪ್ತಚರ ವಿಭಾಗ ರಾಜ್ಯಕ್ಕೆ ಮಾಹಿತಿ ರವಾನಿಸಿದ್ದು, ಪ್ರಕರಣವನ್ನು ಕೇಂದ್ರದ ಸಂಸ್ಥೆಯಿಂದಲೇ ತನಿಖೆ ನಡೆಸುವಂತೆ ಸೂಚನೆ ಕೊಟ್ಟಿದೆ.

ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಎನ್‍ಐಎಗೆ ವಹಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.  ಪ್ರತಿಪಕ್ಷ ಕಾಂಗ್ರೆಸ್ ಕೂಡ ಪ್ರಕರಣವನ್ನು ಸಿಬಿಐ ಇಲ್ಲವೆ ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸಿದೆ.

ಸ್ವತಃ ದಾಳಿಗೊಳಗಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಿಬಿಐಗೆ ಆಗ್ರಹಿಸಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಪ್ರಕರಣ ಸಂಬಂಸಿದಂತೆ ಅನೇಕರನ್ನು ಬಂಸಿದ್ದು, ಕೆಲವರ ವಿರುದ್ದ ಎಫ್‍ಐಆರ್ ದಾಖಲಿಸಿದ್ದಾರೆ.

ಗುರುವಾರ ನಡೆಯಲಿರುವ ಸಂಚಿವ ಸಂಪುಟ ಸಭೆಯಲ್ಲಿ ಎಸ್‍ಡಿಪಿಐ ಸಂಘಟನೆಯ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಇನ್ನು ಮುಂದೆ ರಾಜ್ಯದಲ್ಲಿ ಎಸ್‍ಡಿಪಿಐನ ಯಾವುದೇ ಚಟುವಟಿಕೆಗಳು ನಡೆಯದಂತೆ ಸರ್ಕಾರ ನಿಷೇಧ ಹೇರುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ. ಈಗಾಗಲೇ ಮುಖ್ಯಮಂತ್ರಿ

Facebook Comments

Sri Raghav

Admin