ನವದೆಹಲಿ,ಫೆ.15- ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ನಿಷೇಧಿತ ಭಯೋತ್ಪಾದಕ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೀತರ 60 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ದಾಳಿ ನಡೆಸಿದೆ.
ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರುಗಳಲ್ಲಿ ನಡೆದ ಸೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ನವೆಂಬರ್ 19 ರಂದು ಮಂಗಳೂರು ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಮಹಮ್ಮದ್ ಶಾರೀಕ್ ಬಾಂಬ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಲಾಗಿತ್ತು.
ಸೋಟವು ಆಕಸ್ಮಿಕವಲ್ಲ ಆದರೆ ಗಂಭೀರ ಹಾನಿ ಉಂಟುಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯ ಎಂದು ಕರ್ನಾಟಕ ಪೊಲೀಸರು ನೀಡಿದ ಹೇಳಿಕೆ ಆಧಾರದ ಮೇಲೆ ಎನ್‍ಐಎ ಅಕಾರಿಗಳು ಮೂರು ರಾಜ್ಯಗಳ 60 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಕೊಯಮತ್ತೂರಿನಲ್ಲಿ 2022 ರ ಅಕ್ಟೋಬರ್‍ನಲ್ಲಿ ಎರಡು ತೆರೆದ ಸಿಲಿಂಡರ್‍ಗಳೊಂದಿಗೆ ಕಾರು ಓಡಿಸುತ್ತಿದ್ದ ಜಮೇಜಾ ಮುಬಿನ್ ಎಂಬುವರ ಕಾರು ಸೋಟಗೊಂಡಿತ್ತು. ನಂತರ ಮುಬಿನ್ ಮನೆ ಹುಡುಕಾಟ ನಡೆಸಿದಾಗ ತೀವ್ರ ಸೋಟಕ ವಸ್ತು ಪತ್ತೆಯಾಗಿತ್ತು.ಇದು ಭಯೋತ್ಪಾದಕರ ಭವಿಷ್ಯದ ಯೋಜನೆಗಳ ಉದ್ದೇಶ ಎಂದು ತೋರುತ್ತದೆ ಎಂದು ತಮಿಳುನಾಡು ಪೊಲೀಸ್ ಮುಖ್ಯಸ್ಥ ಸಿ ಸೈಲೇಂದ್ರ ಬಾಬು ಹೇಳಿದ್ದರು.
ಮಂಗಳೂರು ಕುಕ್ಕರ್ ಸೋಟದ ಹೊಣೆ ಹೊತ್ತುಕೊಂಡಿದ್ದ ಇಸ್ಲಾಮಿಕ್ ರೆಸಿಸ್ಪೆನ್ಸ್ ಕೌನ್ಸಿಲ್ ಸಂಸ್ಥೆ ಮಂಗಳೂರಿನಲ್ಲಿ ಕೇಸರಿ ಭಯೋತ್ಪಾದಕರ ಭದ್ರಕೋಟೆ ಕದ್ರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ಆಂಗ್ಲಭಾಷೆಯಲ್ಲಿ ಟೈಪ್ ಮಾಡಿ ಅದರ ಮೇಲೆ ಶಂಕಿತ ಆರೋಪಿ ಶಾರೀಕ್ ಭಾವಚಿತ್ರ ಅಂಟಿಸಿತ್ತು.
ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರಗಾಮಿ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಶರೀಕ್ ನವೆಂಬರ್‍ನಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿದ್ದವು.
ಹೀಗಾಗಿ ಭಯೋತ್ಪಾದಕ ಸಂಘಟನೆಗಳು ದಕ್ಷಿಣ ಭಾರತದಲ್ಲಿ ಸಂಘಟಿತರಾಗುತ್ತಿರುವ ಬಗ್ಗೆ ಅದರಲ್ಲೂ ಕೇರಳ ಭಾಗದಲ್ಲಿ ಸಕ್ರಿಯರಾಗಿರುವ ಬಗ್ಗೆ ದೊರೆತಿರುವ ಖಚಿತ ಮಾಹಿತಿ ಮೇರೆಗೆ ಎನ್‍ಐಎ ಅಕಾರಿಗಳು ಮೂರು ರಾಜ್ಯಗಳ ಹಲವಾರು ಅಡಗುತಾಣಗಳ ಮೇಲೆ ಮುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
#NIA, #raid, #60locations, #TamilNadu, #Karnataka, #Kerala, #Coimbatore