ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

Social Share

ನವದೆಹಲಿ, ನ.23- ಮಿಜೋರಾಂನಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಸ್ಪೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವ್ಯಕ್ತಿಯೊಬ್ಬನನ್ನು ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಜ್ವಾಲಿನ್‍ನಲ್ಲಿ ಲಾಲ್ರಿಂಗ್ಸಂಗ (54) ಎಂಬುವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 21 ರಂದು ಮಿಜೋರಾಂನ ಟಿಪಾದ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ 2,421 ಕೆಜಿ ಸ್ಪೋಟಕಗಳು, 1,000 ಡಿಟೋನೇಟರ್‍ಗಳು, 4,500 ಮೀಟರ್ ಸ್ಪೋಟಿಸುವ ಫ್ಯೂಸ್ ವಯರ್ ಮತ್ತು – 73,500 ರೂ ನಗದು ಮತ್ತು 9.35 ಲಕ್ಷ ಮ್ಯಾನ್ಮಾರ್ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಬೆಳ್ಳಂ ಬೆಳಗ್ಗೆ ಜೆಸಿಬಿ ಘರ್ಜನೆ : 30 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಈಗಾಗಲೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮ್ಯಾನ್ಮಾರ್‍ನ ಪ್ರಜೆಗಳನ್ನು ಬಂಧಿಸಲಾಗಿದೆ ಮತ್ತು ಟಿಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .ಪ್ರಾಥಮಿಕ ತನಿಖೆಯಲ್ಲಿ ಐಜ್ವಾಲಿನಿಂದ ಸ್ಪೋಟಕ ವಸ್ತುಗಳನ್ನು ಮ್ಯಾನ್ಮಾರ್ ಸಾಗಿಸಲಾಗುತ್ತಿತ್ತು,ಇದಕ್ಕೆ ಬಂಧಿತ ಲಾಲ್ರಿಂಗ್ಸಂಗ ಮಧ್ಯವರ್ತಿಯಾಗಿದ್ದ ಎಂದು ತಿಳಿದುಬಂದಿದೆ.

ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

ಮ್ಯಾನ್ಮಾರ್ ಸರ್ಕಾರದ ವಿರುದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಪ್ರತ್ಯೇಕವಾದಿ ಗುಂಪು ಚಿನ್ ನ್ಯಾಷನಲ್ ಫ್ರಂಟ್ ಸ್ಪೋಟಕ ಖರೀದಿಸುತ್ತಿತ್ತು ಎಂದು ಶಂಕಿಸಲಾಗಿದೆ.

NIA, recovery, huge, quantity, explosives, Mizoram,

Articles You Might Like

Share This Article