ಬೆಂಗಳೂರು, ಡಿ. 8- ಕಳವು ಮಾಡಿದ ದ್ವಿಚಕ್ರ ವಾಹನದಲ್ಲಿ ರಾತ್ರಿ ವೇಳೆ ಸುತ್ತಾಡಿ ಒಂಟಿಯಾಗಿ ಓಡಾಡುವ ವ್ಯಕ್ತಿಗಳ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪವನ್‍ಕುಮಾರ್, ಗೌತಮ್ ಮತ್ತು ರಂಗನಾಥ್ ಬಂತ ಆರೋಪಿಗಳು. ಇವರುಗಳಿಂದ 6.5 ಲಕ್ಷ ರೂ. ಮೌಲ್ಯದ 21 ವಿವಿಧ ಕಂಪೆನಿಯ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮುಂಡಿಪುರದ ನಿವಾಸಿಯೊಬ್ಬರು ತಮ್ಮ ಮನೆಯಿಂದ ಹೊರಬಂದು ಸ್ವಲ್ಪ ದೂರ ನಡೆದುಕೊಂಡು ಹೋಗುತ್ತಿದ್ದಾಗ ಒಂದೇ ಬೈಕ್‍ನಲ್ಲಿ ಬಂದ ಮೂವರು ಇವರನ್ನು ಹಿಂಬಾಲಿಸಿಕೊಂಡು ಹೋಗಿ 20 ಸಾವಿರ ಬೆಲೆಯ ಮೊಬೈಲ್‍ನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಿ 6.5 ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪೆನಿಯ 21 ಮೊಬೈಲ್ ಫೋನ್‍ಗಳು ಹಾಗೂ ಕಳವು ಮಾಡಿ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್ ಫಲಿತಾಂಶದಿಂದ ಹಿರಿಹಿರಿ ಹಿಗ್ಗಿದ ಸಿಎಂ ಬೊಮ್ಮಾಯಿ
ಮೊದಲನೇ ಆರೋಪಿಯು ಹಳೆ ಕಳ್ಳನಾಗಿದ್ದು, ಈ ಹಿಂದೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು, ಜಿಗಣಿ ಪೊಲೀಸ್ ಠಾಣೆಯ ದರೋಡೆಗೆ ಸಂಚು ಪ್ರಕರಣ, 2022ನೇ ಸಾಲಿನಲ್ಲಿ ಬೇಗೂರು ಪೊಲೀಸ್ ಠಾಣೆಯ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿರುತ್ತಾನೆ.
ಮೂರನೇ ಆರೋಪಿಯು ಮೊದಲನೆ ಆರೋಪಿಯೊಂದಿಗೆ ಜಿಗಣಿ ಪೊಲೀಸ್ ಠಾಣೆಯ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈ ಆರೋಪಿಗಳು ಮೊಬೈಲ್ ದರೋಡೆ ಕೃತ್ಯಕ್ಕೂ ಮುಂಚೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಅದೇ ವಾಹನ ಬಳಸಿ ರಾತ್ರಿ ವೇಳೆ ಸುತ್ತಾಡಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗಮನಿಸಿಕೊಂಡು ಅವರಿಂದ ಮೊಬೈಲ್ ಫೋನ್‍ಗಳನ್ನು ಸುಲಿಗೆ ಮಾಡುತ್ತಿದ್ದುದ್ದು ತನಿಖೆಯಿಂದ ತಿಳಿದುಬಂದಿರುತ್ತದೆ.
ಆರೋಪಿಗಳ ಬಂಧನದಿಂದ ರಾಜಗೋಪಾಲ ನಗರ ಠಾಣೆಯ ಒಂದು ಪ್ರಕರಣ, ಬಾಗಲಗುಂಟೆ ಠಾಣೆಯ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹಾಗೂ ರಾಜಗೋಪಾಲ ನಗರ ಪೊಲೀಸ್ ಠಾಣೆಯ ಮೂರು ಮೊಬೈಲ್ ಫೋನ್ ಕಳವು ಪ್ರಕರಣಗಳಲ್ಲಿ ಐದು ಮೊಬೈಲ್ ಫೋನ್‍ಗಳು ಪತ್ತೆಯಾಗಿರುತ್ತವೆ.
ಪಿಜಿಯಲ್ಲಿದ್ದ ಹುಡುಗಿಯರ ಅರೆನಗ್ನ ವಿಡಿಯೋ ಮಾಡುತ್ತಿದ್ದವನ ಬಂಧನ
ಉಳಿದ 16 ಮೊಬೈಲ್ ಪೊನ್‍ಗಳ ವಾರಸುದಾರರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಪ್ರವೀಣ್ ಹಾಗೂ ಇನ್ಸ್‍ಪೆಕ್ಟರ್ ಜಗದೀಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
night, mobile, robbing,Three, arrested,