ಬೆಂಗಳೂರು,ಫೆ.28- ಜೆಡಿಎಸ್‍ನ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಇಂದು ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಮಲೈಮಹದೇಶ್ವರ ಬೆಟ್ಟದ ತಾಳು ಬೆಟ್ಟದಿಂದ ಇಂದು ಮಧ್ಯಾಹ್ನ ಪಾದಯಾತ್ರೆ ಕೈಗೊಂಡಿದ್ದಾರೆ.
ಪಾದಯಾತ್ರೆ ಮೂಲಕ ತೆರಳಿ ಮಲೈಮಹದೇಶ್ವರ ಸ್ವಾಮಿ ದರ್ಶನವನ್ನು ನಿಖಿಲ್ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫೆ.26ರಿಂದಲೂ ದೇವರ ದರ್ಶನಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಅನುಕೂಲವಾಗುವಂತೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ನಿಖಿಲ್‍ಕುಮಾರ್ ಅಭಿಮಾನಿ ಬಳಗದಿಂದ ಮಾಡಲಾಗಿದೆ.
