ಉಗ್ರರಿಂದ ಗ್ರೆನೇಡ್ ದಾಳಿ, 9 ಮಂದಿಗೆ ಗಾಯ

Social Share

ಶ್ರೀನಗರ,ಆ.22- ಶ್ರೀನಗರದ ನಿಶಾತ್ ಹೊರವಲಯದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ದಾಲ್ ಸರೋವರದ ದಡದಲ್ಲಿರುವ ಸುಪ್ರಸಿದ್ಧ ಮೊಘಲ್ ಉದ್ಯಾನದ ಮುಂಭಾಗದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಕಾಶ್ಮೀರ ಪ್ರಾಂತ್ಯದ ಟ್ರಾಲ್‍ನ ಬೀಹ್‍ಗುಂಡ್ ಭಾಗದಲ್ಲಿ ಭದ್ರತಾ ಅಧಿಕಾರಿಗಳು 10 ರಿಂದ 12 ಕೆಜಿ ತೂಕದ ಎಲ್‍ಇಡಿನ್ನು ಪತ್ತೆ ಮಾಡಿದ್ದಾರೆ.

ಬೀಹ್‍ಗುಂಡ್ ಪ್ರದೇಶದಲ್ಲಿ ಸುಮಾರು 10-12 ತೂಕದ ಎಲ್‍ಇಡಿ ಸ್ಪೋಟಕ ಕಂಡುಬಂದಿದ್ದು, ಪೊಲೀಸರು ಮತ್ತು ಸೇನೆಯು ಅದನ್ನು ಸ್ಥಳದಲ್ಲೇ ನಾಶಮಾಡುವ ಕಾರ್ಯದಲ್ಲಿ ತೊಡಗಿದೆ. ಸಂಭಾವ್ಯ ಅನಾಹುತವನ್ನು ತಪ್ಪಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ವಲಯವು ಟ್ವಿಟರ್‍ನಲ್ಲಿ ತಿಳಿಸಿದೆ.

Articles You Might Like

Share This Article