ಎನ್‍ಐಒಎಸ್ ಪಬ್ಲಿಕ್ ಪರೀಕ್ಷಾಗೆ ಅಧಿಸೂಚನೆ ಪ್ರಕಟ

Social Share

ಬೆಂಗಳೂರು,ಜ.2- ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ 2022ರ ಏಪ್ರಿಲ್/ಮೇನಲ್ಲಿ 10ಮತ್ತು 12ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಿದೆ. 10ಮತ್ತು 12ನೇ ತರಗತಿಗಳ ಪರೀಕ್ಷೆಗೆ ಪ್ರಥಮ ಬಾರಿಗೆ ಹಾಜರಾಗುತ್ತಿರುವವರು ಮತ್ತು ಹಿಂದಿನ ಪರೀಕ್ಷೆಯಲ್ಲಿ ಪಾಸಾದವರು ವಿಳಂಬ ಶುಲ್ಕ ಇಲ್ಲದಂತೆ 2022ರ ಜನವರಿ 1ರಿಂದ 31ರವರಗೆ ಪರೀಕ್ಷಾ ಶುಲ್ಕ ಪಾವತಿಸಬಹುದಾಗಿದೆ.
2021ರ ಅಕ್ಟೋಬರ್/ನವೆಂಬರ್ ಪರೀಕ್ಷೆಗೆ ನೋಂದಾಯಿಸಿಕೊಂಡವರು/ಹಾಜರಾದವರಿಗೆ ವಿಳಂಬ ಶುಲ್ಕ ರಹಿತವಾಗಿ 2022ರ ಜನವರಿ 16ರಿಂದ 31ರವರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು. ಎಲ್ಲಾ ವಿದ್ಯಾರ್ಥಿಗಳು 2022ರ ಫೇಬ್ರವರಿ ರಿಂದ 10ರ ತನಕ 100 ರೂ.ಗಳ ವಿಳಂಬ ಶುಲ್ಕ ಸಹಿತ ಪರೀಕ್ಷಾ ಶುಲ್ಕ ಪಾವತಿಸಬಹುದು.
ಎಲ್ಲಾ ವಿದ್ಯಾರ್ಥಿಗಳು 1500 ರೂ.ಗಳ ಸಮಗ್ರ ವಿಳಂಬ ಶುಲ್ಕದೊಂದಿಗೆ 2022ರ ಫೆಬ್ರವರಿ 11ರಿಂದ 20ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶವಿದೆ. ಆನ್‍ಲೈನ್ ವಿಧಾನದ ಮೂಲಕ ಮಾತ್ರ ಪರೀಕ್ಷಾ ಶುಲ್ಕ ಸ್ವೀಕರಿಸಲಾಗುತ್ತದ. ಆಫ್‍ಲೈನ್ ಶುಲ್ಕ ಸ್ವೀಕರಿಸಲಾಗುವುದಿಲ್ಲ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪರ್ಷೀಕ್ಷಾ ಶುಲ್ಕದ ಕುರಿತ ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್‍ಸೈಟ್  www.nios.ac.in  ಭೇಟಿ ನೀಡಲು ಕೋರಲಾಗಿದೆ.
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪರೀಕ್ಷಾ ಶುಲ್ಕಗಳನ್ನು ಪಾವತಿಸಿ.
* ಒಮ್ಮೆ ಆದ ಬಳಿಕ ಸಬ್‍ಮಿಟ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಅರ್ಜಿ ಈಗ ಸಲ್ಲಿಕೆಯಾಗಿರುತ್ತದೆ.
ಥಿಯರಿ ಪತ್ರಿಕೆಗಳ ಪ್ರತಿಯೊಂದು ವಿಷಯಕ್ಕೆ 250 ರೂ. ಮತ್ತು ಥಿಯರಿ ಹಾಗೂ ಪ್ರಾಕ್ಟಿಕಲ್ಸ್ ಎರಡೂ ಇರುವ ಪ್ರತಿಯೊಂದು ವಿಷಯಕ್ಕೆ ಹೆಚ್ಚುವರಿಯಾಗಿ 120 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜೊತೆಗೆ ಪ್ರತಿಯೊಂದು ವ್ಯವಹಾರಕ್ಕೆ 50 ರೂ. ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು ಎಂದು ಎನ್‍ಐಒಎಸ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Articles You Might Like

Share This Article