ಮುಂದಿನ ಬಜೆಟ್‍ನಲ್ಲಿ ಬೆಲೆ ಏರಿಕೆಗೆ ಕಡಿವಾಣ: ನಿರ್ಮಲಾ

Social Share

ವಾಷಿಂಗಟನ್, ಅ.12- ಭಾರತ ಎದುರಿಸುತ್ತಿರುವ ಬೆಲೆ ಏರಿಕೆ ಮತ್ತು ನಿಧಾನಗತಿ ಬೆಳವಣಿಗೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಬಜೆಟ್ ರೂಪಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾವiನ್ ಹೇಳಿದ್ದಾರೆ.

ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ನಿಧಿ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ವಾಷಿಂಗಟನ್ ಡಿಸಿ ಪ್ರವಾಸ ಕೈಗೊಂಡಿರುವ ಅವರು, ಪ್ರತಿಷ್ಠಿತ ರ್ಬೋಕಿಂಗ್ ಸಂಸ್ಥೆಯಲ್ಲಿ ಅಗ್ನಿಬದಿಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಖ್ಯಾತ ಆರ್ಥಿಕ ತಜ್ಞ ಈಶ್ವರ್ ಪ್ರಸಾದ್ ಪ್ರಶ್ನೆಗೆ ಉತ್ತರಿಸಿ, ಮುಂದಿನ ಬಜೆಟ್ ಅನ್ನು ಬಹು ಎಚ್ಚರಿಕೆಯಿಂದ ನಿರೂಪಿಸುವುದಾಗಿ ಸ್ಪಷ್ಟ ಪಡಿಸಿದರು.

ಭಾರತ ದುಬಾರಿ ತೈಲ ಬೆಲೆ ಏರಿಕೆಯಿಂದ ಸಮಸ್ಯೆಗಳನ್ನು ಅನುಭವಿಸುತ್ತಿದೆ. ಭಾರತದ ಆರ್ಥಿಕತೆಯೂ ಭವಿಷ್ಯದಲ್ಲಿ ಇದೇ ಕಾರಣಕ್ಕೆ ಸಮಸ್ಯೆ ಅನುಭವಿಸಲಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಹಂತದಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸುವುದು ತುಸು ಕಷ್ಟ ಮತ್ತು ಆತುರ ಎನಿಸಬಹುದು. ಆದರೆ ದೈರ್ಯವಾಗಿ ಹೇಳುವುದೆನೆಂದರೆ ಬೆಳವಣಿಗೆಯ ಆಧ್ಯತೆಗಳನ್ನು ಉನ್ನತ ಸ್ಥಾನದಲ್ಲಿಟ್ಟು ಬಜೆಟ್ ರಚಿಸುವುದಾಗಿ ತಿಳಿಸಿದರು.

ಹಣದುಬ್ಬರದ ಬಗ್ಗೆ ಸಚಿವೆಯಾಗುವ ಮೊದಲು ನಾನು ಆತಂಕ ವ್ಯಕ್ತ ಪಡಿಸಿದ್ದೆ. ಬೆಲೆ ಏರಿಕೆಯ ಸವಾಲನ್ನು ನಾವು ನಿಭಾಯಿಸಲೇಬೇಕಿದೆ. ಆದರೆ ಇದರ ನಡುವೆ ಬೆಳವಣಿಗೆ ಹೇಗೆ ನಿಭಾಯಿಸಲಾಗುತ್ತದೆ ಎಂಬುದು ನೈಸರ್ಗಿಕ ಪ್ರಶ್ನೆಯಾಗಿದೆ ಎಂದರು.

2023-24ನೇ ಸಾಲಿನ ಬಜೆಟ್ ಅನ್ನು 2022ರ ಫೆಬ್ರವರಿ 1ರಂದು ಮಂಡಿಸುವುದಾಗಿ ಹೇಳಿದ ಅವರು, 2022-23ರ ಆರ್ಥಿಕ ವರ್ಷದಲ್ಲಿ ಬಹುತೇಕ ಸಂಸ್ಥೆಗಳು, ಖಾಸಗಿ ಮೂನ್ಸೂಚಕರು ಭಾರತದ ಜಿಡಿಪಿಯನ್ನು ಕಡಿತ ಮಾಡಿ ವಿಶ್ಲೇಷಿಸಿದ್ದಾರೆ.

ಜಾಗತಿಕ ಬಿರುತಲೆಯಿಂದಾಗಿ ಆರ್ಥಿಕತೆ ನಿಧಾನ ಗತಿಯತ್ತ ಸಾಗಿದೆ, ಅದಕ್ಕನುಗುಣವಾಗಿ ನಾವು ಬಿಗಿಯಾದ ವಿತ್ತಿ ನೀತಿಗಳನ್ನು ಜಾರಿಗೊಳಿಸಿದ್ದೇವೆ. ಆದರೆ ಕೋವಿಡೋತ್ತರದಲ್ಲಿ ಭಾರತ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವ ಜೊತೆಗೆ ಅಭಿವೃದ್ಧಿಯ ವೇಗ ಹೆಚ್ಚಳಕ್ಕೆ ಆದ್ಯತೆ ನೀಡಿದೆ ಎಂದರು.

ಮತ್ತೊಂದು ಬಜೆಟ್ ಮಂಡಿಸುವ ಸಮಯ ಹತ್ತಿರ ಬರುತ್ತಿದೆ, ಈ ಬಾರಿ ಎಚ್ಚರಿಕೆಯಿಂದ ಆಯವ್ಯಯವನ್ನು ನಿರೂಪಿಸಲಾಗುವುದು. ಬೆಳವಣಿಗೆಯ ಸ್ಥಿತಿರಕಣಕ್ಕೆ ಒತ್ತು ನೀಡುವುದಾಗಿ ಹೇಳಿದರು.

Articles You Might Like

Share This Article