ಬಜೆಟ್‍ಗೆ ರಾಷ್ಟ್ರಪತಿ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್

Social Share

ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಹಾಗೂ ಎನ್‍ಡಿಎ ಸರ್ಕಾರದ ಪೂರ್ಣಾವ ಕೊನೆಯ ಬಜೆಟ್ 2023-24 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದಕ್ಕೂ ಮುನ್ನಾ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆದುಕೊಂಡರು.

ಸತತವಾಗಿ ಕಾಗದ ರಹಿತ ಬಜೆಟ್‍ನ ಮೂರನೇ ವರ್ಷದಲ್ಲಿ ಟ್ಯಾಬ್ ಬಳಕೆ ಮಾಡುವ ಮೂಲಕ ಬಜೆಟ್ ಮಂಡನೆಯಲ್ಲಿ ಹೈಟೆಕ್ ಸಂಸ್ಕøತಿಯನ್ನು ಕೇಂದ್ರ ಸಚಿವೆ ಮುಂದುರೆಸಿದರು. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಪೂರ್ಣಾವಯ ಬಜೆಟ್‍ಗೆ ಅವಕಾಶ ಇರುವುದಿಲ್ಲ, ಕೇವಲ ಭರವಸೆಗಳ ಆಯವ್ಯಯವನ್ನು ಸಿದ್ದಪಡಿಸಬಹುದು ಮತ್ತು ಲೇಖಾನುದಾನ ಮಾತ್ರ ಪಡೆದುಕೊಳ್ಳಲು ಅವಕಾಶ ಇದೆ.

ಕೇಂದ್ರ ಬಜೆಟ್ : 2023-2024 ( Live Updates)

ಈ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ಮಂಡನೆಯಾಗುವ ಬಜೆಟ್ ಅನ್ನೇ ಪೂರ್ಣಾವಯ ಆಯವ್ಯಯ ಎಂದು ಪರಿಗಣಿಸಲಾಗುತ್ತಿದೆ. ಇಂದು ಬೆಳಗ್ಗೆ ಲೋಕಸಭೆಗೆ ಆಗಮಿಸುವ ಮುನ್ನಾ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಇಲಾಖೆಯ ಸಹದ್ಯೋಗಿ ಸಚಿವರಾದ ಡಾ.ಭಗವತ್ ಕಿಶನ್‍ರಾವ್, ಪಂಕಜ್ ಚೌದರಿ ಮತ್ತು ಹಿರಿಯ ಅಕಾರಿಗಳೊಂದಿಗೆ ಸಂಸತ್‍ನಸ ತಮ್ಮ ಕಚೇರಿಗೆ ಭೇಟಿ ನೀಡಿದರು.

ಭಾರತದ ಜೆಟ್ ಎಂಜಿನ್ ತಯಾರಿಕೆಗೆ ಅಮೆರಿಕ ಸಹಕಾರ

ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್ ಪ್ರತಿಗೆ ಅಂಗೀಕಾರ ಪಡೆದುಕೊಂಡರು. ಬಳಿಕ ನಡೆದ ಸಚಿವ ಸಂಪುಟಸಭೆಯಲ್ಲಿ ಭಾಗವಹಿಸಿದ್ದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಅದನ್ನು ರಾಜ್ಯಸಭೆಯಲ್ಲೂ ಮಂಡಿಸಲಾಯಿತು.

ಕೋವಿಡ್ ನಂತರ ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ವಿಶ್ವವೇ ಆರ್ಥಿಕ ಮುಗ್ಗಟ್ಟು ಹೆದರಿಸುತ್ತಿರುವಾಗ ಭಾರತ ಮಾತ್ರ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಬಜೆಟ್‍ನತ್ತ ದೇಶವಾಸಿಗಳಷ್ಟೆ ಅಲ್ಲ, ಇಡೀ ವಿಶ್ವವೇ ಗಮನ ಕೇಂದ್ರೀಕರಿಸಿತ್ತು.

ಗ್ರಾಮಸ್ಥರಿಂದಲೇ ದೇವಾಲಯದ ಜೀರ್ಣೋದ್ದಾರ

ಪ್ರಧಾನಿ ನರೇಂದ್ರ ಮೋದಿ 2025ರ ವೇಳೆ ಭಾರತವನ್ನು ಐದು ಟ್ರಿಲಿಯನ್‍ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಬಜೆಟ್ ಕೂಡ ಕುತೂಹಲ ಕಾರಿಯಾಗಿದೆ.

Nirmala Sitharaman, Meets, President, Ahead, Union Budget, Presentation,

Articles You Might Like

Share This Article