ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ

Social Share

ನವದೆಹಲಿ,ಫೆ.1- ರಾಜ್ಯಗಳಿಗೆ ಮತ್ತೊಂದು ವರ್ಷಕ್ಕೆ ಬಡ್ಡಿ ರಹಿತ ಸಾಲ ಯೋಜನೆ ಮುಂದುವರಿಕೆ, ಆದಾಯ ತೆರಿಗೆ ಮಿತಿಯನ್ನು 5ರಿಂದ 7 ಲಕ್ಷಕ್ಕೆ ಏರಿಕೆ, ಉದ್ಯೋಗ ಕೌಶಲ್ಯ, ಯುವ ಮತ್ತು ಮಹಿಳಾ ಸಬಲೀಕರಣ, ಶಿಕ್ಷಣ, ರಕ್ಷಣೆಗೆ ಆದ್ಯತೆ ನೀಡುವ, ಮಧ್ಯಮ ವರ್ಗಕ್ಕೆ ಹೊರೆಯಾಗದ, ತೆರಿಗೆ ಭಾರವಿಲ್ಲದ, ಸಾದಾಸೀದ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು.

ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ, ಸಿಗರೇಟ್, ತಂಬಾಕು ಉತ್ಪನ್ನ, ಆಮದು ಮಾಡಿಕೊಂಡ ರಬ್ಬರ್, ಬ್ರಾಂಡೆಡ್ ಬಟ್ಟೆಗಳು,ಹೆಡ್‍ ಫೋನ್‍ಗಳು ಮತ್ತು ಇಯರ್‍ಪೋನ್‍ಗಳು, ಸ್ಮಾರ್ಟ್ ಮೀಟರ್, ಸೌರ ಮಾಡ್ಯೂಲ್‍ಗಳು, ಎಕ್ಸ್-ರೇ ಯಂತ್ರಗಳು, ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳ ದರವನ್ನು ಹೆಚ್ಚಿಸಲಾಗಿದೆ. ಮೊಬೈಲ್ ಪೋನ್ ಬ್ಯಾಟರಿ, ಟಿವಿ, ಸೈಕಲ್, ಕ್ಯಾಮೆರಾ ಲೆನ್ಸ್, ಇ-ವಾಹನಗಳ ಬ್ಯಾಟರಿ, ಬಟ್ಟೆಗಳು, ಪಾಲಿಶ್‍ಡ್ ವಜ್ರಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ಎನ್‍ಡಿಎ ಸರ್ಕಾರದ ಪೂರ್ಣ ಪ್ರಮಾಣದ ಸುಮಾರು 45 ಲಕ್ಷ ಕೋಟಿ ರೂ. ಮೌಲ್ಯದ ಬಜೆಟ್ ಮಂಡನೆ ಮಾಡಿದ ನಿರ್ಮಲ ಸೀತಾರಾಮನ್, ಮಹಿಳೆಯರು, ಹಿರಿಯ ನಾಗರಿಕರು, ಕಾರ್ಮಿಕರು, ರೈತರು ಸೇರಿದಂತೆ ಪ್ರತಿಯೊಬ್ಬರನ್ನೂ ಗಮನದಲ್ಲಿಟ್ಟುಕೊಂಡು ಆಯವ್ಯಯ ಮಂಡಿಸಿದ್ದಾರೆ.

ಕರ್ನಾಟಕಕ್ಕೆ ತೀರಾ ಹೇಳಿಕೊಳ್ಳುವಂತಹ ಯೋಜನೆಯನ್ನು ನೀಡಿಲ್ಲವಾದರೂ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 5300 ಕೋಟಿ ಅನುದಾನ ನೀಡುವ ಮೂಲಕ ಬಂಪರ್ ಕೊಡುಗೆ ಕೊಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಬಸವಳಿದಿದ್ದ ದೇಶದ ಮಧ್ಯಮ ವರ್ಗದವರಿಗೆ ಏಳು ಲಕ್ಷದವರೆಗೂ ಆದಾಯ ತೆರಿಗೆ ವಿನಾಯ್ತಿ ನೀಡಲಾಗಿದೆ. ಈ ಹಿಂದೆ 5 ಲಕ್ಷದವರೆಗೂ ವಿನಾಯ್ತಿ ನೀಡಲಾಗಿತ್ತು.

ಸತತ 5 ಬಜೆಟ್ ಮಂಡಿಸಿದ 6ನೇ ಸಚಿವೆ ನಿರ್ಮಲಾ ಸೀತಾರಾಮನ್

ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಅಬಕಾರಿ ಸುಂಕದ ದರಗಳನ್ನು ಶೇ.21 ರಿಂದ ಶೇ.13ಕ್ಕೆ ಇಳಿಕೆ ಮಾಡಲಾಗಿದೆ. ಆಟಿಕೆಗಳು, ಬೈಸಿಕಲ್‍ಗಳು, ಆಟೋಮೊಬೈಲ್‍ಗಳು ಸೇರಿದಂತೆ ಕೆಲವು ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಗಳು, ಸೆಸ್‍ಗಳು ಮತ್ತು ಸರ್‍ಚಾರ್ಜ್‍ಗಳಲ್ಲಿ ಸಣ್ಣ ಬದಲಾವಣೆಗಳಾಗಿವೆ.
ದೇಶಾದ್ಯಂತ 150 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದ ನಿರ್ಮಲ ಸೀತಾರಾಮನ್, 2014ರಿಂದ ಸ್ಥಾಪಿತವಾಗಿ ಅಸ್ಥಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ ನರ್ಸಿಂಗ್‍ಹೋಮ್‍ಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.

ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮುಂದಿನ 3 ವರ್ಷಗಳಲ್ಲಿ ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 740 ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು.
ಮಕ್ಕಳು ಮತ್ತು ಯುವ ಸಮುದಾಯಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ, ಸ್ಥಳೀಯ ಭೌಗೋಳಿಕತೆ, ಭಾಷೆಗಳಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆ ಮತ್ತು ಸಾಧನ-ಅಜ್ಞಾಯತಾವಾದಿ ಪ್ರವೇಶಕ್ಕೆ ಅನುಕೂಲವಾಗುವಂತೆ ಸ್ಥಾಪಿಸಲಾಗುವುದು.

ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಪೆÇ್ರೀತ್ಸಾಹ ನೀಡಲಾಗಿದೆ.
ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ರೈಲ್ವೆಗೆ 2.40 ಲಕ್ಷ ಕೋಟಿ ರೂ. ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ ಜಾರಿ, ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ. ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ರಸ್ತೆ ನಿರ್ಮಾಣಕ್ಕೆ ನೆರವು ಘೋಷಿಸಲಾಗಿದೆ.

ರೈಲ್ವೇ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಕೊಡುಗೆ

ಮ್ಯಾನ್‍ಹೋಲ್‍ನಿಂದ ಮಷಿನ್ ಹೋಲ್‍ಗೆ ಬದಲಾವಣೆ, ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ. ಕೃತಕ ಬುದ್ಧಿಮತ್ತೆ ಜಾರಿ. ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೆಂಟರ್ ಗಳ ಸ್ಥಾಪನೆ. ಲ್ಯಾಬ್ ನಲ್ಲಿ ಸಹಜ ವಜ್ರಗಳ ಉತ್ಪಾದನೆ ಮೂಲಕ ನೈಸರ್ಗಿಕ ವಜ್ರ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.

ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸಮ್ಮಾನ್ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಶೇ 7 ಬಡ್ಡಿ ದರದಲ್ಲಿ 2 ಲಕ್ಷದವರೆಗೆ ಮಹಿಳಾ ಸಮ್ಮಾನ್ ಪ್ರಮಾಣ ಪತ್ರದಡಿ ಠೇವಣಿ ಇಡುವ ಅವಕಾಶವನ್ನು ಕಲ್ಪಿಸಲಾಗಿದೆ. 2025ರ ವರೆಗೆ ಈ ಯೋಜನೆಯಡಿ ಠೇವಣಿ ಮಾಡಬಹುದು.
ಸಿರಿಧಾನ್ಯಕ್ಕೂ ಆದ್ಯತೆ ನೀಡಲಾಗಿದ್ದು, ಹೈದರಾಬಾದ್‍ನಲ್ಲಿ ಅನ್ನದಾನ ಸಂಶೋಧನಾ ಕೇಂದ್ರ ತೆರೆಯುವುದಾಗಿ ಹಣಕಾಸು ಸಚಿವರು ಘೋಷಣೆ ಮಾಡಿದರು.

Nirmala Sitharaman, presents, Union Budget 2023, tax, free,

Articles You Might Like

Share This Article