ಸತತ 5 ಬಜೆಟ್ ಮಂಡಿಸಿದ 6ನೇ ಸಚಿವೆ ನಿರ್ಮಲಾ ಸೀತಾರಾಮನ್

Social Share

ನವದೆಹಲಿ.ಫೆ.1-ಸತತ ಐದನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಭಾರತದ ಆರನೇ ವಿತ್ತ ಸಚಿವೆ ಎಂಬ ಕೀರ್ತಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಜನರಾಗಿದ್ದಾರೆ.

ಈ ಹಿಂದೆ ಮೊರರ್ಜಿ ದೇಸಾಯಿ, ಮಹಮೋಹನ್ ಸಿಂಗ್, ಯಶವಂತ್ ಸಿನ್ಹಾ, ಆರುಣ್ ಜೇಟ್ಲಿ, ಪಿ.ಚಿದಂಬರಂ ಅವರಂತಹ ಘಟಾನುಘಟಿ ಆರ್ಥ ಸಚಿವರು ಸತತ ಐದು ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದರು.

ಇಂದು ತಮ್ಮ ಸತತ ಐದನೆ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಐದನೆ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ದೇಶದ ಆರನೇ ವಿತ್ತ ಸಚಿವೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2019 ರಿಂದ ಇದುವರೆಗೂ ಐದು ಬಾರಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ಇದೀಗ ದೇಶದ ಅತ್ಯುತ್ತಮ ವಿತ್ತ ಸಚಿವೆ ಎಂಬ ಹಿರಿಮೆಗೂ ಪಾತ್ರರಾಗಿರುವುದು ಉಲ್ಲೇಖಾರ್ಹವಾಗಿದೆ.

ಕೇಂದ್ರ ಬಜೆಟ್ : 2023-2024 ( Live Updates)

2014 ರಲ್ಲಿ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವಾಲಯದ ಅಕಾರ ವಹಿಸಿಕೊಂಡ ನಂತರ, ಜೇಟ್ಲಿ 2014-15 ರಿಂದ 2018-19 ರವರೆಗೆ ಸತತವಾಗಿ ಐದು ಬಜೆಟ್‍ಗಳನ್ನು ಮಂಡಿಸಿದರು.

ಜೇಟ್ಲಿ ಅವರ ಅನಾರೋಗ್ಯದ ಕಾರಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುವ ಪಿಯೂಷ್ ಗೋಯಲ್ ಅವರು 2019-20 ರ ಮಧ್ಯಂತರ ಬಜೆಟ್ ಅಥವಾ ವೋಟ್ ಆನ್ ಅಕೌಂಟ್ ಅನ್ನು ಮಂಡಿಸಿದರು.

2019 ರ ಸಾರ್ವತ್ರಿಕ ಚುನಾವಣೆಯ ನಂತರ, ಮೋದಿ 2.0 ಸರ್ಕಾರದಲ್ಲಿ, ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಬಜೆಟ್ ಮಂಡನೆ ಮಾಡುತ್ತಲೆ ಬಂದಿರುವ ನಿರ್ಮಲಾ ಅವರು 1970-71 ಸಮಯದಲ್ಲಿ ಇಂದಿರಾಗಾಂಧಿ ಅವರ ನಂತರ ಬಜೆಟ್ ಮಂಡಿಸಿದ ಎರಡನೆ ಮಹಿಳಾ ಮಂತ್ರಿಯಾಗಿಯೂ ಹೊರ ಹೊಮ್ಮಿದ್ದಾರೆ.

ಬಜೆಟ್‍ಗೆ ರಾಷ್ಟ್ರಪತಿ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್

Nirmala Sitharaman, sixth, minister, budgets,

Articles You Might Like

Share This Article