ಕಾಳೇನ ಅಗ್ರಹಾರ ಕೆರೆ ಅಭಿವೃದ್ಧಿ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Spread the love

ಬೆಂಗಳೂರು, ಮೇ 15- ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಬೇಗೂರು ವಾರ್ಡ್ ಪ್ರದೇಶದಲ್ಲಿರುವ ಕಾಳೇನ ಅಗ್ರಹಾರ ಕೆರೆಗೆ ಕೇಂದ್ರ ಸರ್ಕಾರದ ಹಣಕಾಸು ಮತ್ತು ಕಾಪೆರ್ರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್ ರವರು ಭೇಟಿ ನೀಡಿ ಸಸಿ ನೆಟ್ಟು ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿದರು.

ಕಾಳೇನ ಅಗ್ರಹಾರ ಕೆರೆಯನ್ನು ಸಂಸತ್ ಸದಸ್ಯರ ಯೋಜನೆಯಡಿ 75 ಲಕ್ಷ ರೂ., ರಾಜ್ಯ ಸರ್ಕಾರದ 2017-18ನೇ ಸಾಲಿನ ಅನುದಾನ 75 ಲಕ್ಷ ರೂ., 2018-19ನೇ ಸಾಲಿನ ಅನುದಾನ 1.5 ಕೋಟಿ ರೂ. ಸೇರಿ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಹೂಳು ತೆಗಯುವುದು, ಕೆರೆ ಏರಿಯಾ ನಿರ್ಮಾಣ, ಕೊಳಚೆ ನೀರು ತಿರುವುಗಾಲುವೆ ನಿರ್ಮಾಣ ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಾಣ, ವಾಯು ವಿಹಾರ ಮಾರ್ಗ ಅಭಿವೃದ್ಧಿ, 15 ಆಸಗಳ ವ್ಯವಸ್ಥೆ, ಕೆರೆಯ ಇನ್ ಲೆಟ್ ಅಭಿವೃದ್ಧಿ, ಶೌಚಾಲಯ ವ್ಯವಸ್ಥೆ, 150 ಕೆಎಲïಡಿ ಸಾಮಥ್ರ್ಯ ಕೊಳಚೆ ನೀರು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.

ಸ್ಥಳೀಯ ಶಾಸಕ ಕೃಷ್ಣಪ್ಪ, ವಲಯ ಆಯುಕ್ತ ಡಾ. ಹರೀಶ್ ಕುಮಾರ್, ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಮುಖ್ಯ ಇಂಜಿನಿಯರ್‍ಗಳಾದ ಶಶಿಕುಮಾರ್, ವಿಜಯ್ ಕುಮಾರ್, ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.