ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಪೋಸ್ ಕೊಟ್ಟ ಅಶೋಕ್ ವಿರುದ್ಧ ಆಕ್ರೋಶ

Social Share

ಬೆಂಗಳೂರು,ನ.12- ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಹೆಗಲ ಮೇಲೆ ಕಂದಾಯ ಸಚಿವ ಆರ್.ಅಶೋಕ್ ಕೈ ಇಟ್ಟು ಫೋಟೋ ಫೋಸ್ ಕೊಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಕಿಡಿಕಾರಿದೆ.

ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನಡೆದ ಫೋಟೋ ಸೆಷನ್‍ನಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ , ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದರ ಜೊತೆಗೆ ಮುಖ್ಯಮಂತ್ರಿಗಳ ಪರಿಸ್ಥಿತಿಗೂ ಮರುಕ ವ್ಯಕ್ತಪಡಿಸಿದೆ.

ಸ್ವಾಮೀಜಿಗಳಿಗೆ ಅವರದೇ ಆದ ಗೌರವ, ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಅಶೋಕ್ ಅವರಿಗೆ ಸದರ ಎನಿಸಿದ್ದಾರೆ? ಇದೇ ರೀತಿ ಮೋದಿ ಅವರ ಹೆಗಲಿಗೆ ಕೈ ಹಾಕುವ ಧೈರ್ಯ ಅಶೋಕ್ ಅವರಿಗಿದೆಯೇ ಎಂದು ಪ್ರಶ್ನಿಸಿದೆ.

ಧರ್ಮ ಸಂಸ್ಕøತಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನ ಇಲ್ಲ ಎಂದು ಕಾಂಗ್ರೆಸ್ ಕುಟುಕಿದೆ. ಮತ್ತೊಂದು ಫೋಟೊದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರನ್ನು ಪಕ್ಕಕ್ಕೆ ತಳ್ಳಿ ಪ್ರಧಾನಿಯವರ ಬಳಿ ನಿಂತು ಫೋಟೋಗೆ ಫೋಸ್ ಕೊಡಲು ಪ್ರಯತ್ನಿಸಿದ್ದಾರೆ.

ವರುಣನ ಅಬ್ಬರಕ್ಕೆ ತಮಿಳುನಾಡು ತತ್ತರ, ಶಾಲಾ-ಕಾಲೇಜು ರಜೆ

ಒಕ್ಕಲಿಗರ ಅಭಿವೃದ್ಧಿ ಅಧ್ಯಕ್ಷರೂ ಆದ ಕೃಷ್ಣಪ್ಪ , ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳ ಪಕ್ಕದಲ್ಲಿ ನುಗ್ಗಿ ಬಂದು ಫೋಸ್ ಕೊಡಲು ಯತ್ನಿಸಿದ್ದಾರೆ. ಈ ಫೋಟೊವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ , ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲು ಹರಸಾಹಸ ಪಡಬೇಕಿದೆ ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಸ್ವತಂತ್ರವಾಗಿ ನಿಲ್ಲಲು ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಇದು ಮುಖ್ಯಮಂತ್ರಿ ಹುದ್ದೆಗೆ ಆಗುತ್ತಿರುವ ಅವಮಾನ ಎಂದು ಟೀಕಿಸಿದೆ.

ಸೋಮವಾರ ಕಾಂಗ್ರೆಸ್ ಕಾರ್ಯಪಡೆಯೊಂದಿಗೆ ಖರ್ಗೆ ಮೊದಲ ಸಭೆ

ಜಗ್ಗೇಶ್‍ರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಫೋಪೆಟ್ ಸಿಎಂ ಬೊಮ್ಮಾಯಿ ಅವರ ಸ್ಥಿತಿ ಶೋಚನೀಯವಾಗಿದೆ ಎಂದು ವ್ಯಂಗ್ಯವಾಡಿದೆ.

Articles You Might Like

Share This Article