ಎಲೆಚುಕ್ಕಿರೋಗ : ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸರ್ಕಾರಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಮನವಿ

Social Share

ಬೆಂಗಳೂರು, ಅ.29- ಅಡಿಕೆ ಮರಗಳಿಗೆ ಮಾರಣಾಂತಿಕವಾದ ಎಲೆಚುಕ್ಕಿರೋಗ ಹರಡಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಭಾರೀ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ಧಾವಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಮಲೆನಾಡು ಪ್ರಾಂತ್ಯವಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಿಂದ ಈ ಭಾಗದ ರೈತರ ಜೀವನಾಧಾರವಾಗಿರುವ ಅಡಿಕೆ, ಕಾಫಿ, ಮೆಣಸು ಬೆಳೆಗಳು ಶೇ.90ರಷ್ಟು ಹಾನಿಗೊಳಗಾಗಿವೆ. ಅಡಿಕೆ ಮರಗಳಿಗೆ ದಶಕಗಳಿಂದಲೂ ಬಾಸುತ್ತಿರುವ ಹಳದಿ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈಗ ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗ ತುಂಬ ವೇಗವಾಗಿ ಹರಡುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸಣ್ಣ ಹಿಡುವಳಿದಾರರು, ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಮಲೆನಾಡು ಕೃಷಿಕರಿಗೆ ಭವಿಷ್ಯದ ಬದುಕಿನ ಬಗ್ಗೆ ಹತಾಷ ಮನೋಭಾವ ಉಂಟಾಗಿದೆ.

ವಂದೇ ಭಾರತ್ ರೈಲಿಗೆ ಮತ್ತೆ ದನ ಡಿಕ್ಕಿ, 20 ನಿಮಿಷ ಪ್ರಯಾಣ ವಿಳಂಬ

ಅಡಿಕೆ ಬೆಳೆಯನ್ನೇ ಅವಲಂಬಿತರಾಗಿರುವ ರೈತರ ಬದುಕು ಜರ್ಝರಿತವಾಗಿದ್ದು, ರೈತರು, ಕೃಷಿ ತಜ್ಞರು ಅಡಿಕೆ ಬೆಳೆರೋಗಗಳ ಸಂಶೋಧನಾಕಾರಿಗಳಿಂದ ಸಲಹೆ ಪಡೆದು ಅಡಿಕೆ ಮರಗಳಿಗೆ ರೋಗ ನಿರೋಧಕ ಔಷಗಳನ್ನು ಸಿಂಪಡಿಸಿದರೂ ಕೂಡ ಈ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾನಿಕಾರಕ ಔಷಧಗಳಿಂದ ಪರಿಸರಕ್ಕೂ ಹಾನಿಯಾಗುವ ಆತಂಕ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಲೆನಾಡಿನ ರೈತರ ಪರಿಸ್ಥಿತಿ ಅವಲೋಕಿಸಿ ಅಡಿಕೆ ಮರಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಔಷ ಒದಗಿಸಿಕೊಡಬೇಕು. ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಇಂದು ಬೆಳಗ್ಗೆ ಸಿಎಂ ಜತೆ ಶ್ರೀಗಳು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.

Articles You Might Like

Share This Article