ನವದೆಹಲಿ,ಮಾ.15- ಬ್ರಿಟನ್‍ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿವಿಧ ದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅವಮಾನಿಸಿರುವ ಬಗ್ಗೆ ಉತ್ತರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಬ್ರಿಟನ್ ಪ್ರವಾಸದಲ್ಲಿದ್ದ ರಾಹುಲ್‍ಗಾಂಧಿ ಕೆಂಬ್ರಿಜ್ಡ್ ವಿಶ್ವವಿದ್ಯಾಲಯದಲ್ಲಿ ಹೇಳಿಕೆ ನೀಡಿ, ಭಾರತದಲ್ಲಿ ಪ್ರಜಾಪ್ರಭುತ್ವವು ದಾಳಿಗೆ ಒಳಗಾಗಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಂಡು ಪ್ರಜಾಪ್ರಭುತ್ವವನ್ನು ನಾಶ ಮಾಡಲು ಬಳಸಲಾಗುತ್ತಿದೆ ಎಂದು ಟೀಕಿಸಿದ್ದರು.
ಇದಕ್ಕಾಗಿ ರಾಹುಲ್‍ಗಾಂಧಿ ಸಂಸತ್‍ಗೆ ಬಂದು ದೇಶದ ಕ್ಷಮೆ ಕೇಳಬೇಕು ಎಂದು ಕೇಂದ್ರ ಸರ್ಕಾರದ ಹಲವಾರು ಹಿರಿಯ ಸಚಿವರು ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ಮೂರು ದಿನಗಳಿಂದ ಸಂಸತ್ ಕಲಾಪದಲ್ಲಿ ಗದ್ದಲವಾಗಿ ಕಲಾಪ ನಡೆಯದೆ ಮುಂದೂಡಿಕೆಯಾಗುತ್ತಿದೆ.
ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕ ಬಂಧನ
ಈ ಕುರಿತು ಸ್ಪಷ್ಟನೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್‍ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುವ ಜನರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಪ್ರಧಾನಿ ನರೇಂದ್ರ ಮೋದಿ ಐದಾರು ದೇಶಗಳಿಗೆ ಹೋಗಿ ಭಾರತದ ಜನರನ್ನು ಅವಮಾನಿಸಿದ್ದರ ಬಗ್ಗೆ ಏನು ಹೇಳುತ್ತಾರೆ.
ಭಾರತದಲ್ಲಿ ಹುಟ್ಟಿದ್ದೆ ಪಾಪ ಎಂದು ಪ್ರಧಾನಿ ವಿದೇಶದಲ್ಲಿ ಹೇಳಿದ್ದರು. ಅದರ ಬಗ್ಗೆ ಮೊದಲು ಪ್ರಧಾನಿ ಕ್ಷಮೆ ಕೇಳಲಿ. ದೇಶದ ಪ್ರಧಾನಿಯಾಗಿ ವಿದೇಶಿ ನೆಲದಲ್ಲಿ ತಾಯ್ನಾಡನ್ನು ಹಿಯಾಳಿಸಿ ಮಾತನಾಡಿದ ಮೋದಿ ಅವರು ಏಕೆ ಪಶ್ಚತಾಪ ಪಡಲಿಲ್ಲ ಎಂದು ಕಿಡಿಕಾರಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ. ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲಾಗುತ್ತಿದೆ, ಟಿವಿ ಚಾನೆಲ್‍ಗಳ ಮೇಲೆ ಹಿಡಿತ ಸಾಧಿಸಿ, ವಿರೋಧ ಪಕ್ಷಗಳ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧಿಸಲಾಗಿದೆ. ತಮ್ಮ ಪರವಾಗಿ ಮಾತನಾಡದ ಹಾಗೂ ಸತ್ಯವನ್ನು ಮಾತನಾಡುವ ಜನರನ್ನು ಜೈಲಿಗೆ ಹಾಕಲಾಗುತ್ತಿದೆ. ಇದು ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಹುನ್ನಾರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕಬ್ಜ ಚಿತ್ರಕ್ಕೆ ಶುಭ ಕೋರಿದ ಡಿಕೆಶಿ ಪುತ್ರಿ
ರಾಹುಲ್‍ಗಾಂಧಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ವಿದೇಶಿ ನೆಲದಲ್ಲಿ ಭಾರತವನ್ನು ದುಭೀಕ್ಷ ರಾಷ್ಟ್ರ, ತಾವು ಬಂದ ಮೇಲೆ ಸಂವೃದ್ಧಿಯಾಗಿದೆ ಎಂದು ಸುಳ್ಳು ಪ್ರಚಾರದ ಮೂಲಕ ಅವಹೇಳನ ಮಾಡಿದ್ದರು. ಅದಕ್ಕಾಗಿ ಅವರು ಈವರೆಗೂ ಕ್ಷಮೆ ಕೇಳಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್‍ನಲ್ಲಿ ಪ್ರತಿಪಕ್ಷಗಳ ಸದಸ್ಯರು ಮಾತನಾಡಿದ್ದನ್ನು ದಾಖಲೆಗಳಿಂದ ತೆಗೆದು ಹಾಕಲಾಗುತ್ತಿದೆ. ಇತಿಹಾಸದಲ್ಲಿ ಈ ರೀತಿ ಎಂದು ನಡೆದಿರಲಿಲ್ಲ ಎಂದು ಖರ್ಗೆ ಕಿಡಿಕಾರಿದರು.
#NoApology, #RahulGandhi, #remarks, #UK, #MallikarjunKharge,