ಬೆಂಗಳೂರು,ನ.28- ಸೈಲೆಂಟ್ ಸುನಿಲ್ ಮೇಲೆ ಸದ್ಯಕ್ಕೆ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ ಹಾಗೂ ಯಾವುದೇ ವಾರಂಟ್ ಇಲ್ಲ ಎಂದು ಸಿಸಿಬಿ ಜಂಟಿ ಆಯುಕ್ತರಾದ ಶರಣಪ್ಪ ತಿಳಿಸಿದ್ದಾರೆ.
ನಿನ್ನೆ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಕಾರ್ಯಕ್ರಮ ದಲ್ಲಿ ಸೈಲೆಂಟ್ ಸುನಿಲ್ ಭಾಗವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ರೌಡಿಶೀಟರ್ಗಳ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ, ಯಾವುದೇ ರಾಜಕೀಯ ನಾಯಕರ ಒತ್ತಡ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವಾರ ಸಿಸಿಬಿ ವತಿಯಿಂದ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ ಕೆಲವರು ಮನೆಯಲ್ಲಿ ಇರಲಿಲ್ಲ. ಇದ್ದವರನ್ನು ವಶಕ್ಕೆ ಪಡೆದು ಎಚ್ಚರಿಕೆ ಕೊಡಲಾಗಿದೆ. ನಾಪತ್ತೆಯಾಗಿದ್ದ ಒಂಬತ್ತು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.
ಎಂಇಎಸ್ ಪುಂಡಾಟಿಕೆಗೆ ನಮ್ಮವರೇ ಕಾರಣ : ಬಸವರಾಜ ಹೊರಟ್ಟಿ
ಅದರಲ್ಲಿ ಸೈಲೆಂಟ್ ಸುನಿಲ್, ಸೈಕಲ್ ರವಿ, ಮುಲಾಮ, ರೋಹಿತ್ ಸೇರಿ ಹಲವರ ಮೇಲೆ ನಿಗಾ ಇಟ್ಟಿದ್ದೇವೆ. ಯಾರ ಯಾರ ಮೇಲೆ ಕೇಸ್ ಇದೆ ಅದನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಶರಣಪ್ಪ ತಿಳಿಸಿದ್ದಾರೆ.
#NoCase #SilentSunil #RowdySheeter