ಕೋವಿಡ್ ಮರಣವಿಲ್ಲದ ಗ್ರಾಮಸ್ಥರಿಂದ ಕೇಶ ಮುಂಡನ ಹರಕೆ

Social Share

ಭೂಪಾಲ್,ಡಿ.1- ಮಧ್ಯಪ್ರದೇಶದ ನೀಮುಕ್ ಜಿಲ್ಲೆಯ ಗ್ರಾಮವೊಂದರ 90ಕ್ಕೂ ಅಧಿಕ ನಿವಾಸಿಗಳು 2021ರಲ್ಲಿ ಅವರ ಹಳ್ಳಿಯಲ್ಲಿ ಒಂದು ಕೋವಿಡ್-19ರ ಮರಣವನ್ನುಂಟು ಮಾಡದೆ ಕಾಪಾಡಿದ್ದಕ್ಕಾಗಿ ಕೇಶಮುಂಡನ ಮಾಡಿಸಿಕೊಂಡು ದೇವಸ್ಥಾನವೊಂದರ ದೇವತೆಯ ಮುಂದೆ ಉತ್ಸಾವಾಚರ ಮಾಡಿದ್ದಾರೆ.
ಕೋವಿಡ್ ಪಿಡುಗು ಪರಾಕಾಷ್ಟೆಯಲ್ಲಿದ್ದಾಗ ಹರಕೆ ಹೊತ್ತಿದ್ದ ಗ್ರಾಮಸ್ಥರು ದೇವನಾರಾಯಣ ದೇವಾಲಯದಲ್ಲಿ ಈ ಉತ್ಸವ ಸಂತರ್ಪಣೆ ನಡೆಸಿದ್ದಾರೆ.
ಭೂಪಾಲ್ನಿಂದ ಸುಮಾರು 400 ಕಿ.ಮೀಗಳಷ್ಟು ದೂರವಿರುವ ನೀಮುಕ್ ಜಿಲ್ಲೆಯ ದೇವ್ರಿ ಖಾವಾಸಾ ಗ್ರಾಮದಲ್ಲಿ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರ ಮೆರವಣಿಗೆ ನಡೆಸಿದರು. ಭಕ್ತಿಗೀತೆಗಳಿಗೆ ನಾಟ್ಯವಾಡುತ್ತಾ ಕೈಗಳಲ್ಲಿ ಧಾರ್ಮಿಕ ಧ್ವಜಗಳನ್ನು ಹಿಡಿದು ಅವರು ಸಾಗಿದರು.

Articles You Might Like

Share This Article