BIG NEWS: ಸಂಸತ್ ಭವನದಲ್ಲಿ ಪ್ರತಿಭಟನೆ, ಧರಣಿ, ಮತ್ತು ಧಾರ್ಮಿಕ ಆಚರಣೆ ನಿಷೇಧ

Social Share

ನವದೆಹಲಿ,ಜು.15- ಸಂಸತ್‍ನಲ್ಲಿ ಬಳಸಬಹುದಾದ ಸಂಸದೀಯ ಪದಗಳ ಪರಿಷ್ಕøತ ಪಟ್ಟಿಗಳ ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದ ಲೋಕಸಭೆ ಸಚಿವಾಲಯ ಇಂದು ಮತ್ತೊಂದು ಆದೇಶದ ಮೂಲಕ ವಿಪಕ್ಷಗಳನ್ನು ಕೆರಳಿಸಿದೆ.

ಸಂಸದೀಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ಅವರು ಬುಲೆಟಿನ್ ಭಾಗ 2ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸದಸ್ಯರು ಸಂಸತ್ ಭವನದಲ್ಲಿ ಯಾವುದೇ ಪ್ರತಿಭಟನೆ, ಧರಣಿ, ಮುಷ್ಕರ, ಉಪವಾಸ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ.

ಸಂಕ್ಷಿಪ್ತ ಆದೇಶಕ್ಕೆ ಎಲ್ಲರೂ ದೃಢವಾದ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಆದರೆ, ಇದು ವಿರೋಧ ಪಕ್ಷಗಳನ್ನು ಕೆರಳಿಸಿದೆ. ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೀಯ ಸಚೇತಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ವಿಶ್ವಗುರುವಿನ ಹೊಸ ವಿನಾಯ್ತಿ ಎಂದು ಲೇವಡಿ ಮಾಡಿದ್ದಾರೆ. ಧರಣ ನಿಷೇಧಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಪಕ್ಷಗಳು ವಿಷಯಾನುಸಾರ ಧರಣಿ ನಡೆಸುತ್ತಿದ್ದವು, ಪ್ರತಿಭಟನೆಗಳಾಗುತ್ತಿದ್ದವು, ಉಪವಾಸ ಕುಳಿತುಕೊಳ್ಳುತ್ತಿದ್ದರು. ಈಗ ಅವೆಲ್ಲದಕ್ಕೂ ನಿಷೇಧ ಹೇರಲಾಗಿದೆ.

ಸಂಸತ್ ಅಧಿವೇಶನದ ವೇಳೆ ಸರ್ಕಾರದ ನಿಲುವುಗಳನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಲು ಸಂಸತ್ ಭವನದ ಆವರಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದವು. ಜು.18ರಿಂದ ಸಂಸತ್ ಕಲಾಪ ಆರಂಭಗೊಳ್ಳಲಿದೆ. ಮೂರು ದಿನ ಮೊದಲು ವಿವಾದಿತ ಆದೇಶದ ಮೂಲಕ ಸರ್ಕಾರ ಪ್ರತಿಪಕ್ಷಗಳನ್ನು ಕೆಣಕಿದೆ. ನಿನ್ನೆ ಅಸಂಸದೀಯ ಪದಗಳ ಪರಿಷ್ಕರಣಾ ಪಟ್ಟಿ ಪ್ರಕಟಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.

ಅದಕ್ಕೆ ಸ್ಪಷ್ಟನೆ ನೀಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಪದಗಳ ಬಳಕೆಯನ್ನು ನಿಷೇಸಿಲ್ಲ. ಸಂದರ್ಭಾನುಸಾರ ಸದಸ್ಯರು ಶಿಷ್ಟಾಚಾರದ ಔಚಿತ್ಯದಲ್ಲಿ ಆರೋಪ, ಟೀಕೆಗಳಿಗೆ ಪದಗಳನ್ನು ಬಳಸಬಹುದು. ಆದರೆ, ಅವುಗಳ ಸಾಂದರ್ಭಿಕತೆಯನ್ನು ಅರ್ಥೈಸಿ ಕಡತದಿಂದ ತೆಗೆದಯುವ ಅಥವಾ ಉಳಿಸಿಕೊಳ್ಳುವ ಬಗ್ಗೆ ಪೀಠಾಕಾರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

Articles You Might Like

Share This Article