ಮಾದಕ ವ್ಯಸನದಿಂದ ದೂರವಿರುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚನೆ

Social Share

ನವದೆಹಲಿ,ಫೆ.25-ಕಾಂಗ್ರೆಸ್ ಸದಸ್ಯರು ಸಾರ್ವಜನಿಕವಾಗಿ ಪಕ್ಷವನ್ನು ಟೀಕಿಸಬಾರದು ಹಾಗೂ ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದು ರಾಯ್‍ಪುರ್‍ದಲ್ಲಿ ನಡೆಯುತ್ತಿರುವ 85ನೇ ಸರ್ವ ಸದಸ್ಯರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ರಾಯ್‍ಪುರದ ಮೂರು ದಿನಗಳ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ಈ ರೀತಿಯ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಸ್ವಯಂಸೇವಕರಾಗಿ ಸಮುದಾಯದ ಸೇವೆ ಮಾಡಬೇಕು ಮತ್ತು ಅವರಿಗೆ ಯಾವುದೇ ಘೋರ ಅಪರಾಧ ಶಿಕ್ಷೆ ಅನುಭವಿಸಿರಬಾರದು ಎಂಬ ನಿಯಮವೂ ಜಾರಿಗೆ ಬಂದಿದೆ.

ಭಾರತದ ಮೇಲೂ ಹಾರಾಟ ನಡೆಸಿದ್ದ ಚೀನಾ ಬೇಹುಗಾರಿಕೆ ಬಲೂನ್‍ಗಳು..!

ಪಕ್ಷದ ಸದಸ್ಯರು ಜಾತ್ಯತೀತತೆ, ಸಮಾಜವಾದ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವಂತೆ ಕೆಲಸ ಮಾಡಬೇಕು. ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ಅಂಗೀಕೃತ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ, ಬಹಿರಂಗವಾಗಿ ಟೀಕಿಸುವಂತಿಲ್ಲ.

ರಾಯ್‍ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‍ನ 85 ನೇ ಸರ್ವಸದಸ್ಯರ ಅಧಿವೇಶನದಲ್ಲಿ 15,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಈ ಸಮಾವೇಶದಲ್ಲಿ 2024 ರ ಲೋಕಸಭೆ ಚುನಾವಣೆ ಎದುರಿಸುವ ಕುರಿತಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಅಧಿವೇಶನದ ಮೊದಲ ದಿನದಂದು, ಕಾಂಗ್ರೆಸ್ ಉಸ್ತುವಾರಿ ಸಮಿತಿಯು ಪಕ್ಷದ ಉನ್ನತ ಮಂಡಳಿಯಾದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸದಿರಲು ನಿರ್ಧರಿಸಿತು ಮತ್ತು ಅದರ ಸದಸ್ಯರನ್ನು ನಾಮನಿರ್ದೇಶನ ಮಾಡಲು ಪಕ್ಷದ ಹೊಸ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡಿತು.

ಔರಂಗಬಾದ್, ಉಸ್ಮಾನಬಾದ್ ಹೆಸರು ಬದಲಾವಣೆಗೆ ಕೇಂದ್ರ ಸಮ್ಮತಿ

ಇಂದು ಪಕ್ಷದ ವಿಷಯಗಳ ಸಮಿತಿಯು ತನ್ನ ಮೊದಲ ಸಭೆಯನ್ನು ನಡೆಸಿತು, ಇದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತಿತರು ಉಪಸ್ಥಿತರಿದ್ದರು. ಅಧಿವೇಶನದಲ್ಲಿ ಅಂಗೀಕರಿಸಬೇಕಾದ ಆರು ನಿರ್ಣಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

No Drugs, Public Criticism, Congress, Members,

Articles You Might Like

Share This Article