ಪೊಲೀಸರ ಜೀಪ್‍ಗೇ ದಂಡ ವಿಧಿಸಿದ ಆಯುಕ್ತರು

Social Share

ಮೈಸೂರು,ಜ.19- ಕಾನೂನು ಪಾಲಿಸಲು ಹೇಳುವ ಪೊಲೀಸರೆ ಕಾನೂನು ಪಾಲಿಸದಿದ್ದಾಗ ಅವರಿಗೇ ದಂಡ
ವಿಧಿಸಿರುವ ಅಚ್ಚರಿ ಪ್ರಕರಣ ವರದಿಯಾಗಿದೆ. ವಾಹನ ನಿಲುಗಡೆ ನಿಷೇಧ(ನೋ ಪಾರ್ಕಿಂಗ್) ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಪೊಲೀಸ್ ಜೀಪ್ ಗಳಿಗೇ ನಗರ ಪೊಲೀಸ್ ಆಯುಕ್ತರು ದಂಡ ವಿಧಿಸಿದ್ದಾರೆ.

ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಪೊಲೀಸರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಪೊಲೀಸ್ ಜೀಪ್ ಗಳನ್ನು ನಿಲ್ಲಿಸಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪೋಟೋ ಕ್ಲಿಕ್ಕಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಅವರಿಗೆ ಕಳುಹಿಸಿದ್ದರು.

ಇದೀಗ ನಗರ ಪೊಲೀಸ್ ಆಯುಕ್ತರು ಜೀಪ್ ನೋಂದಣಿ ಸಂಖ್ಯೆ ಕೆಎ55ಜಿ0376, ಹಾಗೂ ಕೆಎ5550377 ಇದರ ಮಾಲೀಕರಿಗೆ ತಲಾ ಒಂದೊಂದು ಸಾವಿರದಂತೆ ದಂಡ ವಿಧಿಸಿದ್ದಾರೆ.

ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?

ಪೊಲೀಸರು ಸಾರ್ವಜನಿಕರಿಗೆ ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು ಎಂದು ಹೇಳುವುದಷ್ಟೇ ಅಲ್ಲ, ತಾವೂ ಕೂಡ ಅದನ್ನು ಪಾಲನೆ ಮಾಡಬೇಕು. ಹಾಗಿದ್ದಾಗ ಮಾತ್ರ ಸಾರ್ವಜನಿಕರೂ ಕೂಡ ಕಾನೂನನ್ನು ಪಾಲಿಸುತ್ತಾರೆ. ಆ ಉದ್ದೇಶದಿಂದಲೇ ದಂಡ ವಿಧಿಸಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

no parking, police, jeep, fined, Mysore, commissioner,

Articles You Might Like

Share This Article