ನೊಬೆಲ್ ಪುರಸ್ಕೃತ ಯೂನಸ್‍ ವಿರುದ್ಧ ಅರೆಸ್ಟ್ ವಾರೆಂಟ್..!

ಢಾಕಾ, ಅ.10-ಬಾಂಗ್ಲಾದೇಶದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕøತ ಮಹಮದ್ ಯೂನುಸ್ ಅವರಿಗೆ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ. ತಮ್ಮ ಒಡೆತನದ ಕಂಪನಿಯಿಂದ ಕಾರ್ಮಿಕರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಯೂನಸ್ ಅವರಿಗೆ ಢಾಕಾದ ನ್ಯಾಯಾಲಯದ ನ್ಯಾಯಾಧೀಶರಿಂದ ಅರೆಸ್ಟ್ ವಾರೆಂಟ್ ನೀಡಲಾಗಿದೆ.

ಯೂನಸ್ ಜಿಸಿ ಸಂಸ್ಥೆ ಅಧ್ಯಕ್ಷರು, ಕೆಲ ಉದ್ಯೋಗಿಗಳನ್ನು ನೌಕರಿಯಿಂದ ಕಿತ್ತು ಹಾಕಿದ್ದರ ವಿರುದ್ಧ ಕಾರ್ಮಿಕ ಸಂಘಟನೆಯೊಂದು ಕೋರ್ಟ್‍ನಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕøತ ಯೂನುಸ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು.