ನೋಯ್ಡಾ,ಡಿ.27- ಮಾಲ್ ಆಫ್ ಇಂಡಿಯಾ ನಿರ್ಮಿಸಿರುವ ಜಾಗದ ಮೂಲ ಮಾಲೀಕರಿಗೆ 235 ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಡಿಎಲ್ಎಫ್ ಸಂಸ್ಥೆಗೆ ನೋಯ್ಡಾ ಪ್ರಾಧಿಕಾರ ನೋಟೀಸ್ ಜಾರಿ ಮಾಡಿದೆ.
ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯಾಗಿರುವ ಡಿಎಲ್ಎಫ್ ನಿರ್ಮಿಸಿರುವ ಮಾಲ್ ಆಫ್ ಇಂಡಿಯಾದ ಮೂಲ ಜಾಗದ ಮಾಲೀಕರಾಗಿರುವ ವೀರಣ್ಣ ರೆಡ್ಡಿ ಅವರಿಗೆ 235 ಕೋಟಿ ರೂ.ಗಳ ಪರಿಹಾರ ಧನ ನೀಡುವಂತೆ ನೋಟೀಸ್ ಜಾರಿ ಮಾಡಿರುವುದನ್ನು ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ವೀರಣ್ಣ ರೆಡ್ಡಿ ಅವರಿಗೆ ನ್ಯಾಯಬದ್ದವಾಗಿ ಪರಿಹಾರ ನೀಡಬೇಕಾಗಿರುವುದರಿಂದ ನಾವು ಡಿಎಲ್ಎಫ್ ಸಂಸ್ಥೆಗೆ ನೋಟೀಸ್ ನೀಡಿರುವುದಾಗಿ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ತಿಳಿಸಿದ್ದಾರೆ. ಡಿ.23 ರಂದು ಡಿಎಲ್ಎಫ್ ಸಂಸ್ಥೆಗೆ ನೋಟೀಸ್ ನೀಡಲಾಗಿದ್ದು, 15 ದಿನಗಳ ಒಳಗೆ ಪರಿಹಾರ ಧನ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಾಧಿಕಾರದ ಮತ್ತೊಬ್ಬ ಹಿರಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ
ನೋಯ್ಡಾದ ವಾಣಿಜ್ಯ ಕೇಂದ್ರದ ಸೆಕ್ಟರ್ 18ರಲ್ಲಿ ಡಿಎಲ್ಎಫ್ ಸಂಸ್ಥೆಯವರು ಮಾಲ್ ಆಫ್ ಇಂಡಿಯಾ ಕಟ್ಟಡ ನಿರ್ಮಿಸಿದ್ದು, ಪರಿಹಾರ ಪಾವತಿಸುವಂತೆ ನಮಗೆ ಯಾವುದೆ ನೋಟಿಸ್ ಬಂದಿಲ್ಲ. ನೋಟೀಸ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಎಲ್ಎಫ್ ಸಂಸ್ಥೆಯ ವಕ್ತಾರರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನೋಯ್ಡಾ ಪ್ರಾಧಿಕಾರವು 2005 ರಲ್ಲಿ ವೀರಣ್ಣ ರೆಡ್ಡಿ ಅವರಿಂದ ಭೂಮಿ ಸ್ವಾೀಧಿನಪಡಿಸಿಕೊಂಡು ನಂತರ ಅದನ್ನು ಡಿಎಲ್ಎಫ್ ಸಂಸ್ಥೆಗೆ ಹರಾಜು ಮೂಲಕ ಹಸ್ತಾಂತರಿಸಲಾಗಿತ್ತು.
ಇಂದು ದೇಶಾದ್ಯಂತ ಕೋವಿಡ್ ಮಾಕ್ ಡ್ರಿಲ್
ಆದರೆ, ಬೃಹತ್ ಪ್ರಮಾಣದ ಪರಿಹಾರ ಮೊತ್ತ ಪಾವತಿಸಲು ಮೀನಾಮೇಷ ಎಣಿಸುತ್ತಿರುವ ಡಿಎಲ್ಎಫ್ ಸಂಸ್ಥೆಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
Noida Authority, issues, ₹235-crore, payment, notice, DLF,