15 ಸೆಕೆಂಡ್‍ಗಳಲ್ಲಿ ನೆಲಸಮವಾದ ಅವಳಿ ಗೋಪುರಗಳು

Social Share

ನವದೆಹಲಿ, ಆ.28 (ಪಿಟಿಐ)- ಭಾರಿ ಮುನ್ನೆಚ್ಚರಿಕೆಯ ನಂತರ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕುತುಬ್‍ಮೀನಾರ್‍ಗಿಂತ ಎತ್ತರದ ಅವಳಿ ಗೋಪುರಗಳನ್ನು 3700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಿ ಜಲಪಾತದ ಸ್ಫೋಟ ತಂತ್ರದಿಂದ 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು ಯಶಸ್ವಿಯಾಗಿ ನೆಲಸಮಗೊಳಿಸಲಾಯಿತು.

ಅವಳಿ ಗೋಪುರಗಳ ಬಳಿಯಿರುವ ಎಮರಾಲ್ಡ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಗಳ 5,000 ನಿವಾಸಿಗಳನ್ನು ಇಂದು ಮುಂಜಾನೆಯಿಂದಲೇ ಬೇರೆಡೆಗೆ ಸ್ಥಳಾಂತರಿ ಸಲಾಗಿತ್ತು. ಎರಡು ಸೊಸೈಟಿಗಳಲ್ಲಿದ್ದ ಎಲ್ಲರ ಮನೆಗಳ ಅಡುಗೆ ಅನಿಲ ಮತ್ತು ವಿದ್ಯುತ್ ಸರಬರಾಜು ಮಾರ್ಗಗಳನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳಾಂತರಿಸುವ ಕಾರ್ಯವನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಗೋಪುರಗಳ ನೆಲಸಮಕ್ಕೂ ಮುನ್ನ ನೋಯ್ಡಾ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಡ್ರೋನ್‍ಗಳು ಹಾಗೂ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಮೂವರು ವಿದೇಶಿ ತಜ್ಞರು, ಭಾರತೀಯ ಬ್ಲಾಸ್ಟರ್ ಚೇತನ್ ದತ್ತಾ, ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಜನರು ಮಾತ್ರ ಸ್ಫೋಟದ ಗುಂಡಿಯನ್ನು ಒತ್ತುವ ಮೂಲಕ ಗೋಪುರಗಳನ್ನು ನೆಲಸಮಗೊಳಿಸಲಾಯಿತು.
ಗೋಪುರಗಳಿದ್ದ ಪ್ರದೇಶಗಳಲ್ಲಿ ವಾಸಿಸುತ್ತಿದ್ದ 40ಕ್ಕೂ ಹೆಚ್ಚು ಬೀದಿನಾಯಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಅವುಗಳನ್ನು ಆಶ್ರಯಧಾಮಗಳಿಗೆ ಸ್ಥಳಾಂತರಿಸಲಾಗಿತ್ತು.

ಹೌಸ್ ಆಫ್ ಸ್ಟ್ರೇ ಅನಿಮಲ್ಸ, ಫ್ರೆಂಡ್ಕೋಸï, ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಲ್ಟಿ ಟು ಅನಿಮಲ್ಸ ಮತ್ತು ಹ್ಯಾಪಿ ಟೈಲ್ಸ ಫೌಂಡೇಶನ್ ಸೇರಿದಂತೆ ಹಲವಾರು ಎನ್‍ಜಿಒಗಳು ಬೀದಿನಾಯಿಗಳಿಗೆ ತಾತ್ಕಾಲಿಕವಾಗಿ ಆಸರೆ ಒದಗಿಸಿವೆ.

ನಾವು ಪ್ರಾಣಿಗಳನ್ನು ನೆಲಸಮದಿಂದ ರಕ್ಷಿಸಲು ಕಳೆದ 8 ರಿಂದ ಯೋಜನೆ ಮತ್ತು ಕೆಲಸ ಮಾಡುತ್ತಿದ್ದೇವೆ. ಸೋಟಗಳಿಂದ ಪಕ್ಷಿಗಳಿಗೆ ಹಾನಿಯಾಗದಂತೆ ಮೊದಲು ಎರಡು ಅಥವಾ ಮೂರು ಭಾರಿ ಸುಳ್ಳು ಫೈರಿಂಗ್ ಅಥವಾ ಡಮ್ಮಿ ಸ್ಫೋಟಗಳನ್ನು ಮಾಡುವಂತೆ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ಸ್ಫೋಟದ ರೂವಾರಿ ಹೊತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಗೋಪುರಗಳ ನೆಲಸಮ ಪೂರ್ಣಗೊಂಡ ನಂತರ ಬೀದಿ ನಾಯಿಗಳನ್ನು ಮೊದಲಿದ್ದ ಸ್ಥಳಕ್ಕೆ ತಂದು ಬಿಡಲಾಗುವುದು. ನೆಲಸಮ ಕಾರ್ಯದ ಸಂದರ್ಭದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು 40ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

Articles You Might Like

Share This Article