Saturday, September 23, 2023
Homeಇದೀಗ ಬಂದ ಸುದ್ದಿವಾಡಿಕೆಗಿಂತ ಕಡಿಮೆ ಮುಂಗಾರು ಪೂರ್ವ ಮಳೆ

ವಾಡಿಕೆಗಿಂತ ಕಡಿಮೆ ಮುಂಗಾರು ಪೂರ್ವ ಮಳೆ

- Advertisement -

ಬೆಂಗಳೂರು, ಜೂ.1- ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಈ ಬಾರಿ ವಾಡಿಕೆಗಿಂತ ಕಡಿಮೆಯಾಗಿದೆ. ಜನವರಿಯಿಂದ ಮೇ ನಡುವಿನ ಅವಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 129 ಮಿ.ಮೀ.ನಷ್ಟು ಆಗಿದ್ದು, 116.4 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.14ರಷ್ಟು ಹೆಚ್ಚು ಮಳೆಯಾಗಿದೆ. ಅಂದರೆ, ವಾಡಿಕೆಯ 143.3 ಮಿ.ಮೀ.ಮಳೆಗೆ 163.2 ಮಿ.ಮೀ.ನಷ್ಟು ಮಳೆಯಾಗಿದೆ. ಅದೇ ರೀತಿ ಉತ್ತರ ಒಳನಾಡಿನಲ್ಲೂ ಶೇ.15ರಷ್ಟು ವಾಡಿಕೆಗಿಂದ ಹೆಚ್ಚು ಮುಂಗಾರು ಪೂರ್ವ ಮಳೆಯಾದ ವರದಿಯಾಗಿದೆ.

- Advertisement -

ಕೋಟ್ಯಂತರ ರೂ. ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಯತ್ನ : ಇಬ್ಬರ ಬಂಧನ

ವಾಡಿಕೆಯ 83.2 ಮಿ.ಮೀ. ಮಳೆಗೆ 95.4ರಷ್ಟು ಮಳೆಯಾಗಿದೆ. ಆದರೂ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದ ಮಳೆಯಾಗಿಲ್ಲ. ಕೆಲವೆಡೆ ಹೆಚ್ಚು ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಮಳೆ ಕೊರತೆ ಕಂಡುಬಂದಿದೆ.
ಕರಾವಳಿ ಭಾಗದಲ್ಲಿ ಶೇ.61ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.21ರಷ್ಟು ವಾಡಿಕೆಗಿಂತ ಕಡಿಮೆಯಾಗಿದ್ದು, ರಾಜ್ಯದಲ್ಲಿ ಈ ಅವಯಲ್ಲಿ ಮುಂಗಾರು ಪೂರ್ವ ಮಳೆ ಶೇ.2ರಷ್ಟು ಕೊರತೆ ಉಂಟಾಗಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಗದಗ, ಹಾವೇರಿ, ಧಾರವಾಡ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಮಾರ್ಚ್‍ನಿಂದ ಮೇ ನಡುವಿನ ಅವಯಲ್ಲಿ ಹೆಚ್ಚು ಮಳೆಯಾಗಿದ್ದು, ವಾಡಿಕೆಗಿಂತ ಶೇ. 18ರಷ್ಟು ಅಕ ಮಳೆಯಾಗಿದೆ. 138 ಮಿ.ಮೀ.ವಾಡಿಕೆ ಮಳೆಗೆ 163 ಮಿ.ಮೀ.ನಷ್ಟು ಮಳೆಯಾಗಿದೆ. ಮೇನಲ್ಲಿ 119 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.37ರಷ್ಟು ಮಳೆಯಾದ ವರದಿಯಾಗಿದೆ. ಆದರೆ, ಏಪ್ರಿಲ್‍ನಲ್ಲಿ ವಾಡಿಕೆಯ 40 ಮಿ.ಮೀ. ಮಳೆಗೆ 26 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.35ರಷ್ಟು ಕಡಿಮೆಯಾಗಿತ್ತು. ಕಳೆದೊಂದು ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಕಾಂಗ್ರೆಸ್ -ಸರ್ಕಾರದ ನಡುವೆ ಅಂತರ ಸೃಷ್ಟಿಯಾಗಿದೆಯೇ?

ನೈರುತ್ಯ ಮುಂಗಾರು ಸುಮಾರು ಒಂದು ವಾರಕಾಲ ವಿಳಂಬವಾಗುವ ಸಾಧ್ಯತೆಗಳಿವೆ. ಅಂದರೆ ಜೂ.8ರ ನಂತರ ಮುಂಗಾರು ಮಳೆ ರಾಜ್ಯ ಪ್ರವೇಶಿಸಲಿದೆ. ಆದರೆ, ಮುಂಗಾರಿನ ಆರಂಭವೇ ದುರ್ಬಲವಾಗಿರಲಿದೆ ಎಂದು ಹವಾಮಾನತಜ್ಞರು ತಿಳಿಸಿದ್ದಾರೆ.

normal, #premonsoon, #rainfall,

- Advertisement -
RELATED ARTICLES
- Advertisment -

Most Popular