ಬೆಳಗಾವಿ,ಡಿ.27- ಉತ್ತರ ಕರ್ನಾಟಕ ಭಾಗದ ಹಲವು ಪ್ರಮುಖ ರೈತ ನಾಯಕರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ,
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜÁರಕಿಹೊಳಿ, ಸಲೀಂ ಅಹ್ಮದ್, ಮಾಜಿ ಸಚಿವ ಡಿ.ಬಿ.ಇನಾಮದಾರ ಸೇರಿ ಪ್ರಮುಖ ನಾಯಕರು ರೈತ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ , ಹಾವೇರಿ , ಗದಗ , ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿಯ ರೈತ ಸಂಘದ ಪ್ರಮುಖರಾದ ಶಿವಾನಂದ ಹೊಳೆಹಡಗಲಿ, ಬೈಲಪ್ಪ ದಳವಾಯಿ, ಸಿದ್ದಣ್ಣ ಕಂಬಾರ, ಬಿಷ್ಟಪ್ಪ ಶಿಂಧೆ, ಮಡಿವಾಳಪ್ಪ ವರಗಣ್ಣವರ, ಕಲ್ಲಪ್ಪ ಕುಗಟಿ, ಕಲಗೌಡ ಪಾಟೀಲ, ಮಹಾಂತೇಶ ರಾಹುತ,
ಮಗಳ ಅಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ ಯೋಧನನ್ನು ಕೊಂದ ಕಿರಾತಕರು
ನಿಂಗಪ್ಪ ನಂದಿ, ನೀಲಕಂಠ ನೀರೋಳ್ಳಿ, ನಾಗಯ್ಯ ಪೂಜಾರ, ಭೀಮಣ್ಣ ಕಾಸಾಯಿ ಸೇರಿದಂತೆ ಸಾವಿರಾರು ರೈತ ಸಂಘದ ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ.
ಇದೇ ಸಮಯದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿಯವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
North Karnataka, farmer, leaders, join Congress,