ಚೀನಾ-ಉತ್ತರ ಕೊರಿಯಾ ನಡುವೆ ಸರಕು ಸಾಗಾಣಿಕೆ ರೈಲೆ ಸೇವೆ ಪುನರಾರಂಭ

Social Share

ಸಿಯೋಲ್, ಸೆ 26- ಐದು ತಿಂಗಳ ವಿರಾಮದ ನಂತರ ಉತ್ತರ ಕೊರಿಯಾ ಮತ್ತು ಚೀನಾ ಸರಕು ಸಾಗಣೆ ರೈಲು ಸೇವೆಯನ್ನು ಸೋಮವಾರ ಪುನರಾರಂಭಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ, ವಿಶ್ವಸಂಸ್ಥೆಯ ನಿರ್ಬಂಧಗಳು ಮತ್ತು ಇತರ ಅಂಶಗಳಿಂದ ಜರ್ಜರಿತವಾಗಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉತ್ತರ ಕೊರಿಯಾ ಹೆಣಗಾಡುತ್ತಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಕಳೆದ ತಿಂಗಳು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಜಯಿಸುವುದಾಗಿ ನೀಡಿದ ಸಂಶಯಾಸ್ಪದ ಹೇಳಿಕೆ ಬಳಿಕ ಸರಕು ಸಾಗಾಣಿಕೆ ಪುನರ್ ಆರಂಭಗೊಂಡಿದೆ.

ಉತ್ತರ ಕೋರಿಯಾದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಹಲವು ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಸಾಂಪ್ರದಾಯಿಕ ಸ್ರ್ಪಯಾದ ಉತ್ತರ ಕೊರಿಯಾದ ಬೆಳವಣಿಗೆ ಮೇಲೆ ನಿಗಾ ಇಟ್ಟಿರುವ ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಸೋಮವಾರ ಮಹತ್ವದ ಮಾಹಿತಿಯನ್ನು ಹೊರ ಹಾಕಿದೆ.

ಇದನ್ನೂ ಓದಿ : ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

ಸರಕು ಸಾಗಣೆ ರೈಲು ಸೇವೆ ಪುನರ್ ಆರಂಭವನ್ನು ಚೀನಾದ ಬೀಜಿಂಗ್ ಅಥವಾ ಪೊ್ಯಂಗ್ಯಾಂಗ್ ಆಡಳಿತಗಳು ಖಚಿತಪಡಿಸಿಲ್ಲ. ವಕ್ತಾರ ಚೋ ಜುಂಗ್ಹೂನ್ ಮಾತನಾಡಿ, ರೈಲು ಸೇವೆಯು ಎಷ್ಟು ಕಾಲ ಉಳಿಯಬಹುದು ಮತ್ತು ಯಾವ ಸರಕುಗಳು ಸಾಗಾಣಿಕೆಯಾಗಲಿವೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದ್ದಾರೆ.

ಚೀನಾದ ಗಡಿ ನಗರ ದಾಂಡಾಂಗ ನಿಂದ 10 ಕ್ಕೂ ಹೆಚ್ಚು ಬೋಗಿಗಳ ಸರಕು ಸಾಗಣೆ ಉತ್ತರ ಕೊರಿಯಾದ ಸಿನುಯಿಜು ಸೋಮವಾರ ನಗರಕ್ಕೆ ರೈಲ್ವೆ ಸೇತುವೆಯನ್ನು ದಾಟುತ್ತಿರುವುದನ್ನು ನೋಡಿರುವುದಾಗಿ ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಂಡಾಂಗ್ನಲ್ಲಿ ಕೋವಿಡ್ ಹರಡುವಿಕೆಯಿಂದಾಗಿ ಏಪ್ರಿಲ್ನಲ್ಲಿ ಸರಕು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅದಕ್ಕೂ ಮೊದಲು ದಕ್ಷಿಣ ಕೊರಿಯಾ ಕೋವಿಡ್ ಹರಡುವಿಕೆಯನ್ನು ತಡೆಯಲು ಎರಡು ವರ್ಷಗಳ ಹಿಂದೆಯೆ ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಸಂಚಾರ ಮಾರ್ಗಗಳನ್ನು ಅಮಾನತು ಪಡಿಸಿತ್ತು.

ಚೀನಾ ಕೂಡ ಇದೇ ಕ್ರಮವನ್ನು ಅನುಸರಿಸಿತ್ತು. ಈಗ ಉಭಯ ದೇಶಗಳು ಸಂಚಾರ ಮಾರ್ಗಗಳಿಗೆ ಮರು ಚಾಲನೆ ನೀಡಿವೆ.
ಉತ್ತರ ಕೊರಿಯಾದೊಂದಿಗೆ ಚೀನಾ ಸರಂಧ್ರ ಗಡಿಯನ್ನು ಹಂಚಿಕೊಂಡಿದ್ದು, ಆರ್ಥಿಕ ಪೈಪ್ಲೈನ್ ಮತ್ತು ಕೊನೆಯ ಪ್ರಮುಖ ರಾಜತಾಂತ್ರಿಕ ಮಿತ್ರರಾಷ್ಟ್ರವಾಗಿದೆ. ಉತ್ತರ ಕೊರಿಯಾದ ಶೇ.90 ಕ್ಕಿಂತ ಹೆಚ್ಚು ಬಾಹ್ಯ ವ್ಯಾಪಾರವವನ್ನು ಚೀನಾದೊಂದಿಗೆ ನಡೆಸುತ್ತದೆ.

Articles You Might Like

Share This Article