ಸಿಯೋಲ್, ಅ.4 – ಉತ್ತರ ಪುಂಡಾಟ ಪಂಡಾಟ ಮುಂದುವರೆದಿದ್ದು ಜಪಾನ್ ಮೇಲೆ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ.
ಅಮೆರಿಕ ಮಿತ್ರರಾಷ್ಟ್ರದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ.
ಉತ್ತರ ಕೊರಿಯಾದಿಂದ ಉಡಾವಣೆಯಾದ ಒಂದು ಕ್ಷಿಪಣಿ ಜಪಾನ್ ಮೇಲೆ ಹಾರಿ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದಿದೆ ಎಂದು ಎಂದು ಜಪಾನ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ಪ್ರದೇಶಗಳಲ್ಲಿನ ಜನರು ಜಾಗೃತವಾಗಿರುವಂತೆ ಮತ್ತು ಸಾಧ್ಯವಾದರೆ ಮನೆಗಳನ್ನುತೊರೆಯಿರಿ ಎಂದು ಅ„ಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕೊರಿಯಾದ ಕ್ಷಿಪಣಿ ಹಾರಿಸಿದ ಸೂಚನೆ ಸಿಗುತ್ತಿದಂತೆ ಜಪಾನ್‍ನ ಹೊಕ್ಕೈಡೊ ಮತ್ತು ಅಮೊರಿ ಪ್ರದೇಶಗಳಲ್ಲಿ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.ದಕ್ಷಿಣ ಕೊರಿಯಾದ ಜಂಟಿ ಚೀಫ್ಸ ಆಫ್ ಸ್ಟಾಫ್ ಅಧಿಕಾರಿಗಳು ಕ್ಷಿಪಣಿ ಸಾಗುತ್ತಿರುವುದನ್ನು ಖಚಿತ ಪಡಿಸಿದೆ ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಕಳೆದ 10 ದಿನಗಳಲ್ಲಿ ಉತ್ತರ ಕೊರಿಯಾದಿಂದ ಐದನೇ ಸುತ್ತಿನ ಶಸ್ತ್ರಾಸ್ತ್ರ ಪರೀಕ್ಷೆಯಾಗಿದ್ದು, ಆಕ್ರಮಣ ಪೂರ್ವಾಭ್ಯಾಸವೆಂದು ಪರಿಗಣಿಸುತ್ತದೆ ಎಂದು ಹೇಳಲಾಗುತ್ತಿದೆ