ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

Social Share

ಸಿಯೋಲ್, ಅ. 29- ಅಮೆರಿಕ ಎಚ್ಚರಿಕೆ ನೀಡಿದ ಮರುಕ್ಷಣವೇ ಉತ್ತರ ಕೊರಿಯಾ ಸಮುದ್ರದ ಕಡೆಗೆ ಕ್ಷಿಪಣಿಗಳನ್ನು ಹಾರಿಸಿ ತಿರುಗೇಟು ನೀಡಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದ್ದು, ಇದಕ್ಕೆ ಉತ್ತರವೆಂಬಂತೆ ಎರಡು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಹಾರಿಸಿರುವ ಉತ್ತರ ಕೊರಿಯಾ ಪ್ರತಿರೋದ ಒಡ್ಡಿದೆ.

ಉತ್ತರದ ಪೂರ್ವ ಕರಾವಳಿ ಟಾಂಗ್‍ಚಾನ್ ಪ್ರದೇಶದಿಂದ ಕ್ಷಿಪಣಿ ಉಡಾವಣೆಯನ್ನು ದಕ್ಷಿಣ ಕೊರಿಯಾದ ಮಿಲಿಟರಿ ಮುಖ್ಯಸ್ಥರು ತಿಳಿಸಿದ್ದಾರೆ. ಪ್ರಚೋದನೆಯನ್ನು ದಕ್ಷಿಣ ಕೊರಿಯಾ ಬಲವಾಗಿ ಖಂಡಿಸುತ್ತದೆ ಮತ್ತು ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುತ್ತಿರುವ ಉತ್ತರ ಕೊರಿಯಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುವ ಗಂಭೀರ ನಡೆ ಎಂದು ಆರೋಪಿಸಿದೆ.

ಉಡಾವಣೆಗಳು ಉತ್ತರ ಕೊರಿಯಾದ ಅಕ್ರಮ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಅಸ್ಥಿರಗೊಳಿಸುವ ಪರಿಣಾಮವನ್ನು ಎತ್ತಿ ಅಮೆರಿಕ ಮತ್ತು ಜಪಾನ್ ಅಧಿಕಾರಿಗಳು ದೂರವಾಣಿ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕಿಸಿದೆ ಎಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮುಂದಿನ ವಾರದ ವಿಜಿಲೆಂಟ್ ವೈಮಾನಿಕ ಅಭ್ಯಾಸ ಆರಂಭಗೊಳ್ಳಲಿದ್ದು ,ಸುಮಾರು 140 ದಕ್ಷಿಣ ಕೊರಿಯಾದ ಯುದ್ಧವಿಮಾನಗಳು ಮತ್ತು ಸುಮಾರು 100 ಅಮೆರಿಕ ಸಮರ ವಿಮಾನಗಳನ್ನು ಪಾಲ್ಗೊಳುತ್ತಿದೆ.

ಉಭಯ ರಾಷ್ಟ್ರಗಳ ಎಫ್-35 ನಂತಹ ಅತ್ಯಾಧುನಿಕ ಯುದ್ಧ ವಿಮಾನಗಳು ಸೇರಿವೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಒಟ್ಟಾರೆ ಶೀತಲ ಸಮರ ತಾರಕಕ್ಕೆ ಏರಿದ್ದು ಮುಂದೆ ಇದ್ದು ಯುದ್ದವಾದರು ಅಚ್ಚರಿಪಡಬೇಕಿಲ್ಲ.

Articles You Might Like

Share This Article