ಅಮೆರಿಕಾ-ದಕ್ಷಿಣ ಕೊರಿಯಾ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

Social Share

ಸಿಯೋಲ್, ನ.1- ಅಮೆರಿಕಾ ಮತ್ತು ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಟೀಕಿಸಿರುವ ಉತ್ತರ ಕೊರಿಯಾದ ವಿದೇಶಾಂಗ ಸಚಿವ, ಇದು ಸಂಭವನೀಯ ಆಕ್ರಮಣದ ಸಾಧ್ಯತೆಯಾಗಿದ್ದು, ಮತ್ತಷ್ಟು ಅನುಪಾಲನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

ಉತ್ತರ ಕೊರಿಯಾದ ಆಯುಧಾಗಾರಗಳ ಪ್ರಮಾಣ ಹೆಚ್ಚಳ ಮತ್ತು ಅಣ್ವಸ್ತ್ರಗಳ ಆತಂಕಕ್ಕೆ ಪ್ರತಿಯಾಗಿ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸಿವೆ. ಎಫ್ 35 ಪೈಟರ್ ಜೆಟ್ ಸೇರಿ ಸುಮಾರು 200ಕ್ಕೂ ಹೆಚ್ಚು ಯುದ್ಧ ವಿಮಾನಗಳ ಅಭ್ಯಾಸಗಳ ಮೂಲಕ ಉತ್ತರ ಕೊರಿಯಾದ ರಕ್ಷಣಾ ಕ್ಷೇತ್ರಕ್ಕೆ ಸಮೀಪದಲ್ಲೇ ಜಂಟಿ ಅಭ್ಯಾಸ ನಡೆದಿದೆ.

ಉತ್ತರ ಕೊರಿಯಾ ಈ ವರ್ಷ ತನ್ನ ಅಗಾಧ ಯುದ್ಧಾಸ್ತ್ರಗಳ ಪ್ರದರ್ಶನ ಮಾಡಿತ್ತು. 40ಕ್ಕೂ ಹೆಚ್ಚು ಉಡಾವಣಾ ಕ್ಷಿಪಣಿಗಳು, ಅಭಿವೃದ್ಧಿ ಪಡಿಸಲಾದ ಖಂಡಾಂತರ ಕ್ಷಿಪಣಿಗಳು ಮತ್ತು ಮಧ್ಯಂತರ ಕ್ಷಿಪಣಿಗಳನ್ನು ಜಪಾನ್ ಮೇಲಿಂದ ಉಡಾವಣೆ ಮಾಡಲಾಗಿದೆ.. ಈ ಉಡಾವಣೆಯಲ್ಲಿ ಉತ್ತರ ಕೊರಿಯಾ ಖಚಿತತೆಯನ್ನು ಸಾಧಿಸಿದೆ.

ಕ್ಷೀಣ ದೂರದ ಎರಡು ಕ್ಷಿಪಣಿಗಳನ್ನು ಸಮುದ್ರದತ್ತ ಉಡಾವಣೆ ಮಾಡಿದ ದಿನದ ಬಳಿಕ ಉತ್ತರ ಕೊರಿಯಾ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಕಳೆದ ಸೆಪ್ಟಂಬರ್‍ನಿಂದಲೂ ಉತ್ತರ ಕೊರಿಯಾ ಕ್ಷಿಪಣಿಗಳ ಉಡಾವಣೆ ಮಾಡುತ್ತಲೇ ಇದೆ. ಇದು ದಕ್ಷಿಣ ಕೊರಿಯಾ ಮತ್ತು ಅಮೆರಿಕಾದ ಮೇಲಿನ ಅಣ್ವಸ್ತ್ರ ದಾಳಿಗೆ ಪೂರ್ವ ತಯಾರಿ ಎಂದು ಬಿಂಬಿಸಲಾಗಿದೆ.

2.5 ಲಕ್ಷ ಹುದ್ದೆಗಳ ಭರ್ತಿ : ರಾಜ್ಯೋತ್ಸವದಂದು ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಕೋರೊನಾ ಕಾಲಘಟದಲ್ಲಿ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ತಮ್ಮ ಸಮರಾಭ್ಯಾಸವನ್ನು ಅಮಾನತುಗೊಳಿಸಿದ್ದವು. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಸಮರಾಭ್ಯಾಸ ನಡೆಸಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಉತ್ತರ ಕೊರಿಯಾ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಉಭಯ ರಾಷ್ಟ್ರಗಳ ಈ ಕ್ರಮ ಶಾಂತಿ ನಾಶ ಮತ್ತು ಭದ್ರತೆಗೆ ಅಪಾಯವೊಡ್ಡುವ ಮುಖ್ಯ ಅಪರಾಧ ಕೃತ್ಯವಾಗಿದೆ ಎಂದು ಪ್ರತಿಕ್ರಿಯಿಸಿದೆ.

ಹಿಂದಿ ಹೇರಿಕೆ ಕುರಿತು ಬೊಮ್ಮಾಯಿ-ರಿಜ್ವಾನ್ ನಡುವೆ ‘ಭಾಷಣ ಬಡಿದಾಟ’

ವಿದೇಶ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ನಮ್ಮ ದೇಶ ಎಲ್ಲಾ ಮುಂಜಾಗೃತೆ ವಹಿಸಲು ಬದ್ಧವಾಗಿದೆ ಎಂದಿದ್ದಾರೆ.ದಕ್ಷಿಣ ಕೊರಿಯಾಗೆ ಅಮೆರಿಕಾ ಪದೇ ಪದೇ ಮಿಲಿಟರಿ ಬೆಂಬಲ ನೀಡುವುದನ್ನು ಮುಂದುವರೆಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

Articles You Might Like

Share This Article