ಸಿಯೋಲ್, ಮಾ 13-ಯುದ್ಧಕ್ಕೆ ಸಿದ್ಧವಾಗಿರುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತನ್ನ ಪಡೆಗಳಿಗೆ ಆದೇಶಿಸಿರುವ ನಡುವೆ ಇಂದು ಜಲಾಂತರಗಾಮಿಯಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಲಾಗಿದೆ.
ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನಾ ಪಡೆ ದೊಡ್ಡ ಪ್ರಮಾಣದ ಜಂಟಿ ಸಮಾರಾಭ್ಯಾಸವನ್ನು ಆಕ್ರಮಣಕ್ಕೆ ಪೂರ್ವಾಭ್ಯಾಸವೆಂದು ಪರಿಗಣಿಸಿರುವ ಉತ್ತರ ಕೊರಿಯಾದ ಪ್ರತ್ಯುತ್ತರವಾಗಿ ಒಂದು ದಿನದ ಮೊದಲು ಕ್ಷಿಪಣಿ ಪರೀಕ್ಷೆ ನಡೆಸಿದೆ.
ಉತ್ತರ ಕೊರಿಯಾದ ಅಧಿಕೃತ ಸುದ್ದಿವಾನಿನಿ , ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಪ್ರಕಾರ ಕ್ಷಿಪಣಿ ಉಡಾವಣೆಗಳು ಅಮೆರಿಕ ಸಾಮ್ರಾಜ್ಯಶಾಗಳು ಮತ್ತು ದಕ್ಷಿಣ ಕೊರಿಯಾದ ಕೈಗೊಂಬೆ ಪಡೆಗಳ ತಂತ್ರಗಳಿಗೆ ಅಗಾಧ ಶಕ್ತಿಯಉತ್ತರದ ಕೊರಿಯಾ ಸಂಕಲ್ಪವನ್ನು ತೋರಿಸಿದೆ ಎಂದು ಹೇಳಿದೆ.
BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು
ಪರಮಾಣು ಸಿಡಿತಲೆಗಳೊಂದಿಗೆ ಪರೀಕ್ಷಿಸಲಾದ ಕ್ರೂಸ್ ಕ್ಷಿಪಣಿಗಳನ್ನು ನಿಗದಿತ ಗುರಿಗೆ ಸಜ್ಜುಗೊಳಿಸಲಾಗಿದೆ ಕ್ಷಿಪಣಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಿದ್ದು ಸುಮಾರು 1,500 ಕಿಲೋಮೀಟರ್ ದೂರದ ಗುರಿಗಳನ್ನು ಹೊಡೆದಿದೆ.
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ಯೊಂಗಂಗ್ ಹಡಗಿನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಕೆಸಿಎನ್‍ಎ ಹೇಳಿದೆ, ಕಳೆದ ವರ್ಷ ದಾಖಲೆ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳ ನಂತರ, ಉತ್ತರ ಕೊರಿಯಾ ಜನವರಿ. 1 ರಿಂದ ಹಲವಾರು ಹೆಚ್ಚುವರಿ ಶಸ್ತ್ರಗಳ ಪರೀಕ್ಷೆ ನಡೆಸಿದೆ.
#NorthKorea, #launches, #missiles, #submarine,