ಸಿಯೋಲ್,ಫೆ.27-ಉಕ್ರೇನ್‍ನ ಯುದ್ಧ ಸನ್ನಿವೇಶ ಹಾಗೂ ಚೀನಾದ ಚಳಿಗಾಲದ ಒಲಿಂಪಿಕ್ಸ್ ಸಮೀಪಿಸುತ್ತಿರುವ ನಡುವೆ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿ ಆತಂಕ ಮೂಡಿಸಿದೆ.ಇಂದು ಮುಂಜಾನೆ 7.52ರ ಸ್ಥಳೀಯ ಕಾಲಮಾನದ ಪ್ರಕಾರ ಪೊಂಗ್ಯಾಂಗ್‍ನಿಂದ ಜಪಾನ್ ಸಮುದ್ರದ ಕಡೆಗೆ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾದ ಸೇನೆ ತಿಳಿಸಿದೆ.
ಇದರ ಸಾಮಥ್ರ್ಯ 300 ಕಿ.ಮೀ ಕ್ರಮಿಸಲಿದ್ದು, 620 ಕಿ.ಮೀ ಎತ್ತರಕ್ಕೆ ಚಿಮ್ಮಲಿದೆ. ಕ್ಷಿಪಣಿಯ ಈ ವಿಶ್ಲೇಷಣೆಯನ್ನು ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿದ್ದು, ಜಪಾನ್ ಸಹಮತ ವ್ಯಕ್ತಪಡಿಸಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷರ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿವೆ. ಮಾ.9ರಂದು ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ.
ಕಳೆದ ಐದು ವರ್ಷಗಳಿಂದಲೂ ಅಧ್ಯಕ್ಷ ಮುನ್-ಜೆ-ಇನ್ ಅವರು ಉತ್ತರ ಕೊರಿಯಾದ ಜೊತೆಗಿನ ಮಾತುಕತೆಗೆ ಪದೇ ಪದೇ ಪ್ರಯತ್ನಿಸಿದ್ದರು. 2017ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್-ಜಂಗ್-ಹುನ್‍ರೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿದ್ದರು. ಅದು ಯಶಸ್ವಿಯಾಗಿಲ್ಲ. ಹೀಗಾಗಿ ಉತ್ತರ ಕೊರಿಯಾ ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಸೇನಾ ಪ್ರಾಬಲ್ಯಕ್ಕೆ ಆದ್ಯತೆ ನೀಡುತ್ತಿದೆ.
ಈ ವರ್ಷ 8 ಕ್ಷಿಪಣಿಗಳನ್ನು ಪರೀಕ್ಷಾರ್ಥ ಉಡಾವಣೆ ಮಾಡಿದೆ. ಉತ್ತರ ಕೊರಿಯಾದ ಈ ನಡೆಗೆ ಜಪಾನ್, ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆತಂಕ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿ ಪದೇ ಪದೇ ಶಸ್ತ್ರಾಸ್ತ್ರಗಳ ಪರೀಕ್ಷಾ ಪ್ರಯೋಗವನ್ನು ನಡೆಸುತ್ತಿರುವ ಉತ್ತರ ಕೊರಿಯಾವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಟು ಜುಂಗ್ ಅವರ 110ನೇ ಜನ್ಮ ವಾರ್ಷಿಕೋತ್ಸವ ನಡೆಯಲಿದ್ದು, ಅಂದು ಉತ್ತರ ಕೊರಿಯಾ ತನ್ನ ಎಲ್ಲ ಸೇನಾ ಸಾಮಥ್ರ್ಯವನ್ನು ಪ್ರದರ್ಶಿಸಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
