ಉತ್ತರ ಕೊರಿಯಾ ರಣೋತ್ಸಾಹ : ಜಪಾನ್, ದಕ್ಷಿಣ ಕೊರಿಯಾ ಆಕ್ರೋಶ

Social Share

ಸಿಯೋಲï.ಅ,14 – ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಮುದ್ರ ಮಧ್ಯ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗದ ಜೊತೆಗೆ ಗಡಿಯ ಬಳಿ ಯುದ್ಧ ವಿಮಾನಗಳನ್ನು ಹಾರಿಸಿ ಯುದ್ದ ಪ್ರಚೋಧನೆ ನೀಡಿದ್ದು ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಿಸಿದೆ.

ಪರಮಾಣು ಪರೀಕ್ಷೆ ಸಾಮಥ್ರ್ಯವನ್ನು ಹೆಚ್ಚಿಸಲು ಉತ್ತರ ಕೊರಿಯಾದ ಇಂತಹ ದಮನ ನೀತಿ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ಮುಂಜಾನೆ 1:49ರ ಸುಮಾರಿನಲ್ಲಿ ನಮ್ಮ ಗಡಿ ಬಳಿ ಕ್ಷಿಪಣಿ ಹಾರಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಆರೋಪಿಸಿದ್ದಾರೆ.ನಾವು ಕೂಡ ಸಿದ್ದತೆಮಾಡಿಕೊಂಡಿದ್ದೇವೆ ಎಂದರು.

ಜಪಾನಿನ ರಕ್ಷಣಾ ಸಚಿವ ಯಾಸುಕಾಜು ಹಮಡಾ ಕೂಡ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ,ಉದ್ದೇಶಗಳು ಏನೇ ಇರಲಿ, ಉತ್ತರ ಕೊರಿಯಾದ ಪುನರಾವರ್ತಿತ ಕ್ಷಿಪಣಿ ಪ್ರಯೋಗ ಸಂಪೂರ್ಣವಾಗಿ ನಿಯಮ ಉಲ್ಲಂಘನೆ ,ನಾವು ಸ್ವಾಭಿಮಾನ ದೇಶ ರಕ್ಷಣೆ ವಿಷಯವನ್ನು ಕಡೆಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಕೊರಿಯಾದ ಕ್ರಮಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಬೆದರಿಕೆಯನ್ನುಂಟುಮಾಡುತ್ತದೆ ಮತ್ತು ಸಂಪೂರ್ಣವಾಗಿ ಅಸಹನೀಯವಾಗಿದೆ ಎಂದಿದ್ದಾರೆ. ಕೊರಿಯನ್ ಪೆನಿನ್ಸುಲಾ ಮತ್ತು ಜಪಾನ್ ನಡುವಿನ ನೀರಿನಲ್ಲಿ ಇಳಿಯುವ ಮೊದಲು ಕ್ಷಿಪಣಿಯು ಗರಿಷ್ಠ 50 ಕಿಲೋಮೀಟರ್ ಎತ್ತರದಲ್ಲಿ 650 ಕಿಲೋಮೀಟರ್ ದೂರ ಹಾರಿದೆ ಎಂದು ಹೇಳಲಾಗುತ್ತಿದೆ

Articles You Might Like

Share This Article