ಸಿಯೋಲ್, ಜ.31- ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ ಎಂದು ಉತ್ತರ ಕೊರಿಯಾ ದೃಢಪಡಿಸಿದೆ. ಇದು ಇತ್ತೀಗಿನ ವರ್ಷಗಳಲ್ಲಿ ಅತ್ಯಂತ ಮಹತ್ವದ ಶಸ್ತ್ರಾಸ್ತ್ರ ಪರೀಕ್ಷೆಯಾಗಿದ್ದು ಅಮೇರಿಕ ಪ್ರದೇಶವನ್ನು ತಲುಪುವ ಸಾಮಥ್ರ್ಯ ಹೊಂದಿದೆ ಎಂದು ಹೇಳಿಕೊಂಡಿದೆ..
ಹ್ವಾಸಾಂಗ್ -12 ಕ್ಷಿಪಣಿಯು ಆಯ್ದ ಪ್ರದೇಶ ಮುಟ್ಟುವ ಮತ್ತು ನಿಖರ ಗುರಿ ಹೊಡೆಯಬಲ್ಲದು ಎಂದು ಅಧಿಕೃತ ಉತ್ತರಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ಹೇಳಿದೆ.ಕ್ಷಿಪಣಿಯ ಸಿಡಿತಲೆಯಲ್ಲಿ ಅಳವಡಿಸಲಾದ ಕ್ಯಾಮರಾವು ಬಾಹ್ಯಾಕಾಶದಿಂದ ಭೂಮಿಯ ಚಿತ್ರವನ್ನು ತೆಗೆದುಕೊಂಡಿತು ಮತ್ತು ಆಯುಧ ವ್ಯವಸ್ಥೆಯ ಕಾರ್ಯಾಚರಣೆಯ ನಿಖರತೆ, ಭದ್ರತೆ ಮತ್ತು ಪರಿಣಾಮಕಾರಿತ್ವವನ್ನು ಅಕಾಡೆಮಿ ಆಫ್ ಡಿಫೆನ್ಸ್ ಸೈನ್ಸ್ ï ದೃಢಪಡಿಸಿದೆ ಎಂದು ಹೇಳಿದೆ.
ಉತ್ತರ ಕೊರಿಯಾವು ಕ್ಷಿಪಣಿಯನ್ನು ತನ್ನ ಪೂರ್ವ ಕರಾವಳಿಯ ನೀರಿನ ಕಡೆಗೆ ಮತ್ತು ಇತರ ದೇಶಗಳು ಅತಿಕ್ರಮಿಸುವುದನ್ನು ತಡೆಯಲು ಎತ್ತರದ ಕೋನದಲ್ಲಿ ಉಡಾಯಿಸಲಾಗಿದೆ ಎಂದು ಹೇಳಿದೆ.ದಕ್ಷಿಣ ಕೊರಿಯಾದ ಮತ್ತು ಜಪಾನಿನ ಮೌಲ್ಯಮಾಪನದ ಪ್ರಕಾರ, ಕ್ಷಿಪಣಿಯು ಸುಮಾರು 800 ಕಿಲೋಮೀಟರ್ ಹಾರಿಹೋಯಿತು ಮತ್ತು ಕೊರಿಯನ್ ಪೆನಿನ್ಸುಲಾ ಮತ್ತು ಜಪಾನ್ ನಡುವಿನ ನೀರಿನಲ್ಲಿ ಇಳಿಯುವ ಮೊದಲು ಗರಿಷ್ಠ 2,000 ಕಿಲೋಮೀಟರ್ ಎತ್ತರವನ್ನು ತಲುಪಿತು ಎಂದು ಹೇಳಿದೆ.
ಉತ್ತರ ಕೊರಿಯಾ ಪರೀಕ್ಷಿಸಿದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದೆ, ಹ್ವಾಸಾಂಗ್ -12 ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಉತ್ತರ ಏಷ್ಯಾದ ಅಮೆರಿಕ ಹಾಗು ತರೆ ರಾಷ್ರಗಳ ಮಿಲಿಟರಿ ನೆಲೆಗಳನ್ನು ಗಿರಿಯಾಗಿಸಿದೆ. ಹ್ವಾಸಾಂಗï-12 ಪರಮಾಣು ಸಾಮಥ್ರ್ಯದ ಕ್ಷಿಪಣಿಯು ನೆಲದಿಂದ ನೆಲಕ್ಕೆ ಜಿಗಿಯುವ ಅಸ್ತ್ರವಾಗಿದ್ದು, ಪ್ರಮಾಣಿತ ಪಥದಲ್ಲಿ ಹಾರಿಸಿದಾಗ ಅದರ ಗರಿಷ್ಠ ವ್ಯಾಪ್ತಿಯು 4,500 ಕಿಲೋಮೀಟರ್ ಎಂದು ಶತ್ರುಗಳನ್ನು ಬೆದರಿಸಲಾಗಿದೆ.
