ಹೈಪರ್ ಸಾನಿಕ್ ಕ್ಷಿಪಣಿಯ 2ನೇ ಯಶಸ್ವಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

Social Share

ಸಿಯೋಲ್, ಜ.6- ಅಧ್ಯಕ್ಷ ಕಿಮ್‍ಜಾಂಗ್ ಉನ್ ಕೋವಿಡ್-19ರ ಸಾಂಕ್ರಾಮಿಕದ ಪಿಡುಗಿನ ನಡುವೆಯೂ ತನ್ನ ಮಿಲಿಟರಿ ಪಡೆಯ ಬಲ ಹೆಚ್ಚಿಸಲು ಸಂಕಲ್ಪ ಮಾಡಿದ ಕೆಲವೇ ದಿನಗಳಲ್ಲಿ ಶಬ್ದಾತೀತ ವೇಗದ ಕ್ಷಿಪಣಿಯೊಂದರ ಎರಡನೆ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯಾ ತಿಳಿಸಿದೆ.
ಉತ್ತರ ಕೊರಿಯಾ ನಿನ್ನೆ ನಡೆಸಿದ ಈ ಪ್ರಯೋಗ ಸುಮಾರು ಎರಡು ತಿಂಗಳಲ್ಲಿ ಎರಡನೆಯದಾಗಿದೆ. ಇದು ಯಾವುದೇ ಸಮಯದಲ್ಲಿ ನಿಶ್ಶಸ್ತ್ರೀಕರಣ ಮಾತುಕತೆಗೆ ಮರಳುವ ಬದಲಾಗಿ ಅದು ಅಣ್ವಸ್ತ್ರ ಮತ್ತು ಕ್ಷಿಪಣಿ ಅಸ್ತ್ರಗಳನ್ನು ಆಧುನೀಕರಣಗೊಳಿಸುವ ಯೋಜನೆ ಹೊಂದಿರುವುದನ್ನು ತೋರಿಸುತ್ತದೆ.
ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬಗ್ಗೆ ಅಪಾರ ಸಂತೃಪ್ತಿ ವ್ಯಕ್ತಪಡಿಸಿದೆ. ಪ್ರಮುಖ ಶಸ್ತ್ರಾಸ್ತ್ರ ಅಧಿಕಾರಿಗಳು ಈ ಪರೀಕ್ಷೆಯನ್ನು ವೀಕ್ಷಿಸಿದರು ಎಂದು ಅಧಿಕೃತ ಕೊರಿಯನ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಶಬ್ದಾತೀತ ವೇಗದ ಕ್ಷಿಪಣಿಗಳು ಶಬ್ದದ ವೇಗಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸುತ್ತವೆ ಮತ್ತು ಅವುಗಳ ವೇಗ ಹಾಗೂ ಶಕ್ತಿಯ ಕಾರಣದಿಂದ ಕ್ಷಿಪಣಿ ವ್ಯವಸ್ಥೆಗಳಿಗೆ ಮಹತ್ತರ ಸವಾಲುಗಳನ್ನೊಡ್ಡಬಲ್ಲವು.

Articles You Might Like

Share This Article