ಸಿಯೋಲ್,ಡಿ.20- ಜಪಾನ್ ತನ್ನ ಸೇನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವುದರ ವಿರುದ್ಧ ಕೆಂಡ ಕಾರಿರುವ ಉತ್ತರ ಕೊರಿಯಾ, ರಕ್ತ ಮತ್ತು ನಿರ್ಣಾಯಕ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಚೀನಾ ಮತ್ತು ಉತ್ತರ ಕೊರಿಯಾದಿಂದ ಬೆದರಿಕೆ ಅನುಭವಿಸುತ್ತಿರುವ ಜಪಾನ್ನ ಸೋಮವಾರ ತನ್ನ ಭದ್ರತಾ ತಂತ್ರಗಾರಿಕೆಯನ್ನು ಪ್ರಕಟಿಸಿದೆ. ಪ್ರತಿದಾಳಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಿಲಿಟರಿ ಶಕ್ತಿ ವೃದ್ಧಿಗೆ ದ್ವಿಗುಣ ಹೂಡಿಕೆ ಮತ್ತು ಅಪರಾಧಾತ್ಮಕ ಹೆಜ್ಜೆಗಳ ವಿರುದ್ಧ ಕಾರ್ಯಾಚರಣೆ ಸಾಮಾಥ್ಯವನ್ನು ಹೆಚ್ಚಿಸಿಕೊಳ್ಳುವುದಾಗಿ ತಿಳಿಸಿದೆ.
ಇದರಿಂದ ರೊಚ್ಚಿಗೆದ್ದಿರುವ ಉತ್ತರ ಕೊರಿಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮದಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆ ಉಲ್ಲೇಖಿಸಿ ವರದಿ ಪ್ರಸಾರ ಮಾಡಿದೆ. ಜಪಾನ್ ಪ್ರತಿದಾಳಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸ್ವ ರಕ್ಷಣೆಗಾಗಿ ಸೀಮಿತವಾಗಿಲ್ಲ. ಇತರ ದೇಶಗಳು ಹಾಗೂ ಅಲ್ಲಿನ ಪ್ರಾಂತ್ಯಗಳ ಮೇಲೆ ದಾಳಿ ನಡೆಸಲು ಪೂರ್ವ ತಯಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೇಳ್ರಪ್ಪ ಕೇಳಿ, ಹೊಸ ವರ್ಷಕ್ಕೂ ಮುನ್ನ ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಲಿವೆಯಂತೆ..!
ಜಪಾನ್ನ ಮೂರ್ಖತನದ ಈ ಕ್ರಮ ಕಪ್ಪು ಹೃದಯದ ದುರಾಸೆಯನ್ನು ತಣಿಸುವ ಪ್ರಯತ್ನವಾಗಿದೆ. ಸ್ವಯಂ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಸೇನಾ ಸಾಮಥ್ರ್ಯ ಹೆಚ್ಚಳ ಪ್ರತಿದಾಳಿಗೆ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳಾಗಿವೆ. ಇವು ನ್ಯಾಯ ಸಮ್ಮತವಲ್ಲ ಮತ್ತು ಸಹಿಸಲು ಸಾಧ್ಯವಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.
ವಲಯವಾರು ಶಾಂತಿಯನ್ನು ಕದಡಲು ಅಮೆರಿಕಾ ಜಪಾನ್ಗೆ ಕುಮ್ಮಕ್ಕು ನೀಡುತ್ತಿದೆ. ಜಪಾನ್ನ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳಲು ನೆರವು ನೀಡಲಾಗುತ್ತಿದೆ. ಅಮೆರಿಕಾ ಬಲವಂತವಾಗಿ ತನ್ನ ಕ್ರಮಗಳನ್ನು ಮುಂದುವರೆಸಿದರೆ, ಉತ್ತರ ವಲಯದ ರಕ್ಷಣೆಗಾಗಿ ನಾವು ಕಠಿಣ ಮತ್ತು ನಿರ್ಣಾಯಕ ಪ್ರಮಾಣದ ಹೊಸ ತಂತ್ರಗಾರಿಕೆಯನ್ನು ಅನುಸರಿಸಬೇಕಾಗುತ್ತದೆ. ದಾಳಿಯನ್ನು ಹತ್ತಿಕ್ಕಲು ಶತ್ರುಗಳ ವಿರುದ್ಧ ಆಯುಧ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಜಪಾನ್ನ ದಿಢೀರ್ ಕ್ರಮಗಳು, ದ್ವೇಷಪೂರಿತ ಪ್ರಯತ್ನಗಳು ಅದರ ಉದ್ದೇಶಗಳನ್ನು ಸ್ಪಷ್ಟಪಡಿಸುತ್ತವೆ. ಜಪಾನ್ ಸ್ಥಿತ್ಯಂತರ ಕ್ರಮಗಳ ವಿರುದ್ಧ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ಸೌರ್ವಭೌಮತ್ವ, ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ಎರಡನೇ ಮಹಾಯುದ್ಧದ ವೇಳೆ ಜಪಾನ್ ನಡೆಸಿದ ಯುದ್ಧಾಪರಾಧಗಳಿಂದಾಗಿ ಇತರ ದೇಶಗಳಂತೆ ನಮ್ಮ ದೇಶದಲ್ಲಿಯೂ ಜಪಾನ್ ವಿರೋ ಭಾವನೆಗಳು ಆಳವಾಗಿ ಬೇರೂರಿವೆ. ಆ ದಿನದ ನೋವುಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ : ಖರ್ಗೆ
ಉತ್ತರ ಕೊರಿಯಾ ದೀಪವು 190ರಿಂದ 1945ರ ನಡುವೆ ಜಪಾನ್ ವಸಹಾತು ಶಾಹಿ ಆಳ್ವಿಕೆಯಲ್ಲಿತ್ತು. ವಿಶ್ವದ ಎರಡನೇ ಮಹಾಯುದ್ಧದ ವೇಳೆ ಅಮೆರಿಕಾದ ಬೆಂಬಲದೊಂದಿಗೆ ಸಂಪೂರ್ಣ ಸ್ವಾತಂತ್ರ ಪಡೆದಿದೆ. ಬದಲಾದ ಪರಿಸ್ಥಿತಿಯಲ್ಲಿ ಜಪಾನ್ನ ಹಿರೋಶಿಮಾ-ನಾಗಸಾಕಿಯಲ್ಲಿ ಅಣು ಬಾಂಬ್ ದಾಳಿ ನಡೆಸಿದ ಅಮೆರಿಕಾವೇ ಈಗ ಮಿತ್ರರಾಷ್ಟ್ರವಾಗಿದೆ. ಸ್ವತಂತ್ರ್ಯಕ್ಕೆ ನೆರವು ಪಡೆದುಕೊಂಡ ಉತ್ತರ ಕೊರಿಯಾ ಶತ್ರು ಪಾಳೆಯದಲ್ಲಿ ನಿಂತಿದೆ.
North Korea, slams, Japan, military, buildup,