ಸಿಯೋಲ್,ಜ.19- ವಿಶ್ವದ 170 ದೇಶಗಳ ಪೈಕಿ ಸೇನಾ ಸಾಮಾಥ್ರ್ಯ ಹೆಚ್ಚಳಕ್ಕೆ ಹೆಚ್ಚು ಅನುದಾನ ಮೀಸಲಿಡುತ್ತಾ ಬಂದಿರುವ ಉತ್ತರ ಕೋರಿಯಾ, ಜಾಗತಿಕ ರಾಷ್ಟ್ರಗಳ ಕೆಂಗಣ್ಣಿನ ಹೊರತಾಗಿಯೂ ಈ ವರ್ಷದ ಬಜೆಟ್ನಲ್ಲೂ ರಕ್ಷಣೆಗೆ ಹೆಚ್ಚು ಅನುದಾನ ನಿಗದಿ ಮಾಡಿದೆ.
ನಿನ್ನೆಗೆ ಕೊನೆಯಾದ ಎರಡು ದಿನಗಳ ಜನಪ್ರತಿನಿಧಿ ಸಂಸತ್ನಲ್ಲಿ ದೇಶದ ಬಜೆಟ್ಗೆ ಅಂಗೀಕಾರ ನೀಡಲಾಗಿದೆ. ಅದರ ಪ್ರಕಾರ ಕಳೆದ ವರ್ಷಕ್ಕಿಂತಲೂ ಈ ಬಾರಿಯ ಬಜೆಟ್ ಗಾತ್ರ ಶೇ.1.7ರಷ್ಟು ಹೆಚ್ಚಾಗಿದೆ. ಅದರಲ್ಲಿ ರಕ್ಷಣಾ ಕ್ಷೇತ್ರಕ್ಕಾಗಿ ಶೇ.15.9ರಷ್ಟು ಹಣ ಮೀಸಲಿಡಲಾಗಿದೆ.
ಯುದ್ಧ ಸಾಮಾಗ್ರಿಗಳ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಿಸುವ, ದೇಶದ ಘನತೆ ಮತ್ತು ಭದ್ರತೆಯನ್ನು ಖಚಿತ ಪಡಿಸಲು ಈ ಕ್ರಮ ಅನಿವಾರ್ಯ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವಿಶ್ಲೇಷಿಸಿವೆ.
ಡಬ್ಬಲ್ ಎಂಜಿನ್ ಸರ್ಕಾರದಿಂದ ಡಬ್ಬಲ್ ಬೆನಿಫಿಟ್ : ಮೋದಿ
ಅಮೆರಿಕಾ ರಕ್ಷಣಾ ಇಲಾಖೆ ಅಂದಾಜಿನ ಪ್ರಕಾರ 2019ರಲ್ಲಿ ಉತ್ತರ ಕೊರಿಯಾ ಮಿಲಿಟರಿ ವೆಚ್ಚಗಳು ಮತ್ತು ಶಸ್ತ್ರಾಸ್ತ್ರಗಳಿಗಾಗಿ ಸುಮಾರು 4 ಶತಕೋಟಿ ಡಾಲರ್ಗಳನ್ನು ವೆಚ್ಚ ಮಾಡಿದೆ. ಇದು ದೇಶದ ಒಟ್ಟು ಜಿಡಿಪಿಯಲ್ಲಿ ಶೇ.26ರಷ್ಟು ಎಂದು ವಿಶ್ಲೇಷಿಸಲಾಗಿತ್ತು.
ಕೋವಿಡ್ ಹಾಗೂ ಆರ್ಥಿಕ ಹಿಂಜರಿತದ ನಡುವೆ ಉತ್ತರ ಕೋರಿಯಾ ಜರ್ಝರಿತವಾಗಿದೆ. ಅದರ ನಡುವೆಯೂ ಸರ್ವಾಕಾರಿ ಕಿಮ್ ಜಂಗ್ ಪರಮಾಣು ಸಿಡಿತಲೆಗಳ ಪ್ರಮಾಣ ಹೆಚ್ಚಳದ ಮಹತ್ವಾಕಾಂಕ್ಷೆಗಾಗಿ ಹಣ ವ್ಯಯ ಮಾಡುತ್ತಿದ್ದಾರೆ. ರಬ್ಬರ್ ಸ್ಟಾಂಪ್ನಂತೆ ಕೆಲಸ ಮಾಡುವ ಜನಪ್ರತಿನಿಧಿಗಳ ಸಂಸತ್ನಲ್ಲಿ ಹೆಚ್ಚಿನ ಚರ್ಚೆ ಇಲ್ಲದೆ ಬಜೆಟ್ ಅಂಗೀಕಾರವಾಗಿದೆ.
ಬಿಜೆಪಿ ಬಿ-ರಿಪೋರ್ಟ್, ಭರವಸೆಗಳ ಸರ್ಕಾರ : ಡಿಕೆಶಿ
ಜನ ಸಾಮಾನ್ಯರ ಸಂಕಷ್ಟಕ್ಕಿಂತಲೂ ಹೆಚ್ಚಿನ ಹಣವನ್ನು ಯುದ್ಧ ಸಾಮಾಗ್ರಿಗಳ ಪ್ರಮಾಣ ಹೆಚ್ಚಳಕ್ಕೆ ಬಳಕೆ ಮಾಡುತ್ತಿರುವ ಬಗ್ಗೆ ದೇಶದಲ್ಲಿ ಯಾರು ಆಕ್ಷೇಪ ವ್ಯಕ್ತ ಪಡಿಸಿದ್ದು ಕಂಡು ಬಂದಿಲ್ಲ.
ಪ್ರಮುಖವಾಗಿ ದಕ್ಷಿಣ ಕೊರಿಯಾವನ್ನು ಗುರಿಯಾಗಿಟ್ಟುಕೊಂಡು ಉತ್ತರ ಕೊರಿಯಾ ತಯಾರಿ ನಡೆಸಿದೆ. ಅಮೆರಿಕಾ ದಕ್ಷಿಣ ಕೊರಿಯಾಗೆ ಬೆಂಬಲ ನೀಡಿ, ಜಂಟಿ ಸಮರಾಭ್ಯಾಸ ನಡೆಸಿದ ಬಳಿಕವಂತೂ ಉತ್ತರ ಕೊರಿಯಾ ರೊಚ್ಚಿಗೆದ್ದು ನಿಂತಿದೆ. ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಸಂಭವನೀಯ ಯದ್ಧಕ್ಕೆ ಪೂರ್ವ ತಯಾರಿಗೆ ಸೇನೆಗೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಕಳೆದ ವರ್ಷ ಹಲವು 70 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ದಕ್ಷಿಣ ಕೊರಿಯಾದತ್ತ ಹಾರಿಸಿ ಕಿಮ್ ಜಂಗ್ ಸವಾಲು ಎಸೆದಿದ್ದರು.
North Korea, sustains, high defense, spending, new budget,